Pakistan Horror – Man Burnt Alive : ಮತಾಂಧ ಮುಸ್ಲಿಮರು ಆರೋಪಿಯನ್ನು ಪೊಲೀಸ್ ಠಾಣೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ !

  • ಪಾಕಿಸ್ತಾನದಲ್ಲಿ ಕುರಾನ್ ಅವಹೇಳನದ ಆಪಾದನೆಯ ಪರಿಣಾಮ !

  • ಆರೋಪಿಯ ಶವ ಹೊರ ತಂದು ಸುಟ್ಟರು !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ಕುರಾನ್ ಅನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಮತಾಂಧ ಮುಸಲ್ಮಾನರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಈ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದು ಶವವನ್ನು ಹೊರಗೆ ತಂದು ಸುಟ್ಟು ಹಾಕಿದೆ. ಈ ವೇಳೆ ನಡೆದ ಹಿಂಸಾಚಾರದಲ್ಲಿ 8 ಮಂದಿ ಗಾಯಗೊಂಡಿದ್ದಾರೆ.

ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ವ್ಯಕ್ತಿಯೊಬ್ಬರು ಜೂನ್ 20 ರ ರಾತ್ರಿ ಸ್ವಾತ್‌ನ ಮಾದಯನ್ ತೆಹಸಿಲ್‌ನಲ್ಲಿ ಕುರಾನ್‌ನ ಕೆಲವು ಪುಟಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿ ಮಾಡಿದ ನಂತರ ಪೊಲೀಸರು ಶಂಕಿತನನ್ನು ಮಡಯನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಸ್ವಾತ್ ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶಗಳಲ್ಲಿ ಮಾತ್ರವಲ್ಲದೆ, ಭಾರತದಲ್ಲಿಯೂ ಸಹ, ಕುರಾನ್, ಪ್ರವಾದಿ ಮುಹಮ್ಮದ್ ಮುಂತಾದವರ ಅವಮಾನಿಸಿದ ನಂತರ ಮತಾಂಧ ಮುಸ್ಲಿಮರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಯಾರೂ ಅವರಿಗೆ ಏನನ್ನೂ ಹೇಳುವುದಿಲ್ಲ. ಮತ್ತೊಂದೆಡೆ, ಹಿಂದೂಗಳ ಶ್ರದ್ಧಾಸ್ಥಾನವನ್ನು ಹಿಂದೂಗಳೇ ಅವಹೇಳನ ಮಾಡುತ್ತಾರೆ ಮತ್ತು ಇತರ ಹಿಂದೂಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅವರನ್ನು ಬೆಂಬಲಿಸುತ್ತಾರೆ ! ಅವಮಾನವನ್ನು ಯಾರಾದರೂ ವಿರೋಧಿಸಿದರೂ ಕ್ರಮ ತೆಗೆದುಕೊಳ್ಳುವುದಿಲ್ಲ !