IIT Mumbai Students Fined : ಮುಂಬಯಿಯ `ಐಐಟಿ’ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ 20 ಸಾವಿರ ದಂಡ !

ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ವ್ಯಂಗ ನಾಟಕ ಪ್ರಸಾರ ಮಾಡಿದ ಪ್ರಕರಣ

ಮುಂಬಯಿ – ವಾರ್ಷಿಕ ಕಲಾ ಉತ್ಸವದಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾಮಾತೆಯನ್ನು ಅವಮಾನ ಮಾಡುವ ‘ಆರೋಹಣ’ ಈ ನಾಟಕವನ್ನು ಪ್ರದರ್ಶನ ಮಾಡಿದರು. ಈ ಪ್ರಕರಣದಲ್ಲಿ ಮುಂಬಯಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐ.ಐ.ಟಿ.) ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯು ತಲಾ 1 ಲಕ್ಷದ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಾರ್ಚ್ 31, 2024 ರಂದು ಮುಂಬಯಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಭಾಗೃಹದಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು.

ಈ ನಾಟಕದಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿತ್ತು. ಈ ನಾಟಕದಲ್ಲಿ ಆಧುನಿಕತೆಯ ಹೆಸರಿನಡಿಯಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾಮಾತೆಯವರ ಆಕ್ಷೇಪಾರ್ಹ ಸಂಭಾಷಣೆಗಳಿದ್ದವು. ನಾಟಕದ ಪ್ರದರ್ಶನದ ನಂತರ, ಸಾಮಾಜಿಕ ಮಾಧ್ಯಮದಿಂದ ಇದರ ‘ಕ್ಲಿಪ್’ (ಅಲ್ಪಾವಧಿಯ ವೀಡಿಯೊ) ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಯಿತು, ಆಗ ಈ ಘಟನೆ ಗಮನಕ್ಕೆ ಬಂತು. ಕಲಾಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಈ ನಾಟಕದಿಂದ ಧಾರ್ಮಿಕ ಭಾವನೆಯನ್ನು ನೋಯಿಸಲಾಗಿದೆಯೆಂದು ಕೆಲವು ವಿದ್ಯಾರ್ಥಿಗಳು ಸಂಸ್ಥೆಯ ಆಡಳಿತ ಮಂಡಳಿಗೆ ದೂರು ನೀಡಿದರು. ತದನಂತರ ಸಂಸ್ಥೆಯ ಶಿಸ್ತುಪಾಲನಾ ಸಮಿತಿಯ ಸಭೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ಹಿರಿಯ ವರ್ಗದ ವಿದ್ಯಾರ್ಥಿಗಳಿಂದ ತಲಾ 1 ಲಕ್ಷ 20 ಸಾವಿರ ರೂಪಾಯಿ ಮತ್ತು ಕಿರಿಯ ವರ್ಗದ ವಿದ್ಯಾರ್ಥಿಗಳಿಂದ ತಲಾ 40 ಸಾವಿರ ದಂಡ ವಿಧಿಸಲಾಗಿದೆ. ಇದರೊಂದಿಗೆ ವಸತಿಗೃಹದಲ್ಲಿ ನೀಡಲಾಗಿರುವ ಸೌಲಭ್ಯಗಳನ್ನು ಕೂಡ ಈ ವಿದ್ಯಾರ್ಥಿಗಳಿಗೆ ನಿರಾಕರಿಸಿರುವ ಮಾಹಿತಿ ಸಂಸ್ಥೆಯ ಆಡಳಿತ ದೊರಕಿದೆ.

ಸಂಪಾದಕೀಯ ನಿಲುವು

ಪ್ರಗತಿಪರರ ಹೆಸರಿನಡಿಯಲ್ಲಿ ಭಾರತಾದ್ಯಂತ ಕೆಲವು ಸ್ಥಳಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ನಾಟಕದ ಮೂಲಕ ಹಿಂದೂಗಳ ದೇವತೆಗಳ ಅವಮಾನ ಮಾಡಲಾಗುತ್ತದೆ. ಐ.ಐ.ಟಿ.ಯ ಆಡಳಿತ ಮಂಡಳಿ ತೆಗೆದುಕೊಂಡಂತಹ ಕಠಿಣ ನಿರ್ಣಯವನ್ನು ಇತರೆ ಸ್ಥಳಗಳಲ್ಲಿಯೂ ತೆಗೆದುಕೊಂಡರೆ ಇಂತಹ ಪ್ರಕಾರಗಳು ಹತೋಟಿಗೆ ಬರುತ್ತದೆ !