(‘ಯುಜಿಸಿ-ನೆಟ್‘ ಪರೀಕ್ಷೆ ಅಂದರೆ ವಿಶ್ವ ವಿದ್ಯಾಲಯ ಅನುದಾನ ಆಯೋಗ-ರಾಷ್ತ್ರೀಯ ಅರ್ಹತಾ ಪರೀಕ್ಷೆ)
ನವ ದೆಹಲಿ – ಕೇಂದ್ರ ಶಿಕ್ಷಣ ಸಚಿವಾಲಯವು ‘ಯುಜಿಸಿ-ನೆಟ್‘ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪರೀಕ್ಷೆ ಜೂನ್ ೧೮ ರಂದು ನಡೆದಿತ್ತು. ಇದರಲ್ಲಿ ದೇಶದಾದ್ಯಂತ ೩೧೭ ನಗರಗಳಲ್ಲಿನ ೧ ಸಾವಿರದ ೨೦೫ ಕೇಂದ್ರಗಳಲ್ಲಿ ೯ ಲಕ್ಷಕ್ಕೂ ಅಧಿಕ ಬಾಲಕ-ಬಾಲಕಿಯರು ಭಾಗವಹಿಸಿದ್ದರು. ಈ ಪರೀಕ್ಷೆಯನ್ನು ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ‘ಕಡೆಯಿಂದ (ರಾಷ್ತ್ರೀಯ ಅರ್ಹತಾ ಪರೀಕ್ಷಾ ಸಂಸ್ಥೆ) ನಡೆಸಿತ್ತು. ಈಗ ಈ ಪರೀಕ್ಷೆ ಪುನಃ ನಡೆಯಲಿದೆ. ಯುಜಿಸಿ ನೆಟ್ ಪರಿಕ್ಷೆಯನ್ನು ಜೂನ್ ಮತ್ತು ಡಿಸೆಂಬರ್ ತಿಂಗಳ ಮಧ್ಯೆದಲ್ಲಿ ನಡೆಸಲಾಗುತ್ತದೆ.
ಶೀಕ್ಷಣ ಸಚಿವಾಲಯವು, ಈ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಸೂಚನೆಗಳು ಸಿಕ್ಕಿವೆ ಎಂದು ಹೇಳಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು, ಹೀಗೆ ನಿರ್ಧರಿಸಲಾಯಿತು.
Government is committed to ensure the sanctity of examinations and protect the interest of students.
Ministry of Education has decided that the UGC-NET June 2024 Examination be cancelled on the basis of inputs from Indian Cyber Crime Coordination Centre (I4C) under the Ministry…
— Ministry of Education (@EduMinOfIndia) June 19, 2024