|
ಮುಂಬಯಿ – ‘ಹಮಾರೆ ಬಾರಹ’ ಸಿನೆಮಾದ ನಿರ್ಮಾಪಕರು ಸಿನೆಮಾದ ಕೆಲವು ಭಾಗಗಳನ್ನು ಅಳಿಸಲು ಮತ್ತು ಕೆಲವು ಬದಲಾವಣೆ ಮಾಡಲು ಒಪ್ಪಿಕೊಂಡ ನಂತರ ಮುಂಬಯಿ ಹೈಕೋರ್ಟ್ ಜೂನ್ 21 ರಂದು ಸಿನೆಮಾದ ಬಿಡುಗಡೆಗೆ ಅನುಮತಿ ನೀಡಿದೆ. ನ್ಯಾಯಮೂರ್ತಿ ಬಿ.ಪಿ. ಕುಲಾಬಾವಾಲಾ ಮತ್ತು ನ್ಯಾಯಮೂರ್ತಿ ಫಿರ್ದೋಶ್ ಪುನಿವಾಲಾ ಅವರ ವಿಭಾಗೀಯ ಪೀಠವು ಒಪ್ಪಂದ ಮಾಡಿಕೊಳ್ಳುವಂತೆ ಎರಡೂ ಕಡೆಯವರಿಗೆ ನಿರ್ದೇಶನ ನೀಡಿದೆ.
ಸಿನೆಮಾದ ಪ್ರದರ್ಶನದ ಹಿಂದೆ ಇರುವ ವಿವಾದವೇನು ?
‘ಹಮಾರೆ ಬಾರಹ’ ಈ ಸಿನೆಮಾದಲ್ಲಿ ‘ಐ ವಿಲ್ ಕಿಲ್ ಯೂ, ಅಲ್ಲಾ ಹು ಅಕ್ಬರ್’ (ಅಲ್ಲಾ ಮಹಾನ್ ಆಗಿದ್ದಾನೆ) ಎಂಬುದು ಸಂಭಾಷಣೆ ಇದೆ. ಇದರಲ್ಲಿ ‘ಅಲ್ಲಾ ಹು ಅಕಬರ’ ಈ ಉಚ್ಚಾರಣೆಯನ್ನು ತೆಗೆಯುವಂತೆ ವಿಭಾಗೀಯ ಪೀಠವು ಸೂಚಿಸಿದೆ ಮತ್ತು ಸೆನ್ಸಾರ್ ಮಂಡಳಿಯ ಅನುಮತಿಯಿಲ್ಲದೆ ಸಿನೆಮಾದ ಬಿಡುಗಡೆಯ ಪೂರ್ವ ಜಾಹೀರಾತನ್ನು ಪ್ರದರ್ಶಿಸಿದ್ದಕ್ಕಾಗಿ ನಿರ್ಮಾಪಕರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಾಲಯದ ನಿರ್ದೇಶನದ ನಂತರ ಜಾಹೀರಾತನ್ನು ತೆಗೆದುಹಾಕಲಾಗಿದೆ.
‘ಈ ಜಾಹಿರಾತು ಮುಸಲ್ಮಾನರ ಭಾವನೆಗಳಿಗೆ ಘಾಸಿಗೊಳಿಸುವಂತೆ ಹಾಗೂ ಮುಸ್ಲಿಂ ಮಹಿಳೆಯರ ಭಾವನೆಗೆ ಅವಮಾನ ಮಾಡಿದ್ದರಿಂದ ಪುಣೆಯ ಅಜರ್ ತಾಂಬೋಲಿ ಅವರು ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಸಿನೆಮಾದ ಬಿಡುಗಡೆಯನ್ನು ನಿಷೇಧಿಸಿದೆ ಮತ್ತು ಜಾಹೀರಾತನ್ನು ತೆಗೆದುಹಾಕಲು ನಿರ್ದೇಶಿಸಿತ್ತು ಮತ್ತು ಮುಂಬಯಿ ಹೈಕೋರ್ಟ್‌ನ ನ್ಯಾಯಾಧೀಶರು ಚಲನಚಿತ್ರವನ್ನು ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ಸಂದೇಶ ನೀಡುವ ಸಿನೆಮಾ ! – ಹೈಕೋರ್ಟ್
ಹೈಕೋರ್ಟ್, ನಾವು ಚಿತ್ರವನ್ನು ನೋಡಿದ್ದೇವೆ ಮತ್ತು ಸಿನೆಮಾದಲ್ಲಿ ವಿವಾದಾತ್ಮಕ ಏನೂ ಇಲ್ಲ. ಇದೊಂದು ಸಾಮಾಜಿಕ ಸಂದೇಶವಿರುವ ಸಿನೆಮಾ ಆಗಿದೆ. ಕೆಲವು ಆಕ್ಷೇಪಾರ್ಹ ಪದಗಳು ಮತ್ತು ದೃಶ್ಯಗಳನ್ನು ತೆಗೆದುಹಾಕಬೇಕು. ಸಿನಿಮಾ ನೋಡದೆ ಕಾಮೆಂಟ್ ಮಾಡಿದ್ದು ತಪ್ಪು ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದೆ. ಆದರೂ ಈ ಸಿನೆಮಾದ ಜಾಹೀರಾತು ಹೆಚ್ಚು ಅಯೋಗ್ಯ ಮತ್ತು ವಿವಾದಾತ್ಮಕವಾಗಿದೆ. ಇದು ಕುರಾನ್‌ನ ಸಾಲುಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಮಹಿಳೆಯರ ಮೇಲೆ ಅನ್ಯಾಯ ಮತ್ತು ದಬ್ಬಾಳಿಕೆ ಮಾಡುವ ವ್ಯಕ್ತಿಯ ಕುರಿತಾದ ಚಲನಚಿತ್ರವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ಶಿಪ್ ಈಗಾಗಲೇ ನಮಗೆ ಕೆಲವು ಬದಲಾವಣೆಗಳನ್ನು ಸೂಚಿಸಿದೆ.
Bombay High Court permits release of ‘Hamare Baarah’
Film that sends out a social message – HC
Directs makers to remove objectionable dialogues
Producers fined Rs 5 lakhs for releasing the trailer without proper #CBFC certification#HamareBarahpic.twitter.com/5HCoCsTx5I
— Sanatan Prabhat (@SanatanPrabhat) June 19, 2024