ಪುಸ್ತಕಗಳನ್ನು ಸುಟ್ಟರೂ ಜ್ಞಾನ ಅಳಿಸಿಹೋಗುವುದಿಲ್ಲ ! – ಪ್ರಧಾನಿ ಮೋದಿ

ನಳಂದಾ ವಿದ್ಯಾಪೀಠದ ಹೊಸ ಸ್ವರೂಪ ಲೋಕಾರ್ಪಣೆ !

ನಳಂದಾ (ಬಿಹಾರ) – ‘ನಳಂದಾ’ ಇದು ಕೇವಲ ಹೆಸರಲ್ಲ, ಅದು ಒಂದು ಗುರುತಾಗಿದೆ. ನಳಂದಾ ಒಂದು ಮೌಲ್ಯ, ಮಂತ್ರ, ಅಭಿಮಾನ ಮತ್ತು ಕಥೆಯಾಗಿದೆ. ಬೆಂಕಿಯ ಜ್ವಾಲೆಯಲ್ಲಿ ಪುಸ್ತಕಗಳನ್ನು ಸುಟ್ಟಿರಬಹುದು; ಆದರೆ ಈ ಜ್ವಾಲೆಗಳು ಜ್ಞಾನವನ್ನು ನಾಶ ಮಾಡಲಾರವು ಎಂದು ಪ್ರಧಾನಿ ಮೋದಿ ಅವರು ನಳಂದಾ ವಿದ್ಯಾಪೀಠದ ನೂತನ ಕಟ್ಟಡದ ಉದ್ಘಾಟನೆ ಮಾಡಿದ ನಂತರ ಹೇಳಿದರು.

‘ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಮೊದಲ 10 ದಿನಗಳಲ್ಲಿ ನನಗೆ ನಳಂದಾಗೆ ಬರುವ ಅವಕಾಶ ಸಿಕ್ಕಿತು. ಇದು ನನ್ನ ಸೌಭಾಗ್ಯವಾಗಿದೆ. ‘ಭಾರತದ ಅಭಿವೃದ್ಧಿ ಪಯಣದ ಒಂದು ಉತ್ತಮ ಲಕ್ಷಣವಾಗಿದೆ’. ಈ ದೃಷ್ಟಿಯಿಂದ ಇದನ್ನು ನಾನು ನೋಡುತ್ತೇನೆ’, ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಉಪಸ್ಥಿತರಿದ್ದರು.