ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ತುಂಡು ಪತ್ತೆ!

ನವದೆಹಲಿ – ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಕೊಟ್ಟ ಆಹಾರದಲ್ಲಿ ಬ್ಲೇಡ್ ನ ಚೂರು(ತುಂಡು) ಪತ್ತೆಯಾಗಿದೆ. ಏರ್ ಇಂಡಿಯಾ ಅಧಿಕಾರಿ ರಾಜೇಶ್ ಡೋಗರಾ ಇದನ್ನು ದೃಢಪಡಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರ ಆಹಾರದಲ್ಲಿ ಬ್ಲೇಡ್‌ನ ತುಂಡು ಪತ್ತೆಯಾಗಿದೆ. ತನಿಖೆಯ ನಂತರ, ಅದು ತರಕಾರಿ ಕತ್ತರಿಸಲು ಬಳಸುವ ಯಂತ್ರದ ತುಂಡಾಗಿದೆ ಎಂದು ತಿಳಿದುಬಂದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಸಂಪಾದಕೀಯ ನಿಲುವು

ಪ್ರಯಾಣಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವ ವಿಮಾನ ಸಾರಿಗೆ ಸಂಸ್ಥೆಗಳಿಂದ ದಂಡ ವಸೂಲಿ ಮಾಡಬೇಕು!