ಟೆಲ್ ಅವಿವ್ – ಗಾಜಾ ಪಟ್ಟಿಯಲ್ಲಿ ಇನ್ನೂ ಒತ್ತೆಯಾಳಾಗಿರುವ ಇಸ್ರೇಲಿ ನಾಗರಿಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಇಸ್ರೇಲಿಗಳು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಜೂನ್ 17 ರಂದು ಪ್ರತಿಭಟನೆ ನಡೆಸಿದರು. ಈ ಒತ್ತೆಯಾಳುಗಳನ್ನು ತಾಯ್ನಾಡಿಗೆ ವಾಪಸ್ಸು ಕರೆತರಲು ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿದರು. ಹಮಾಸ್ ಭಯೋತ್ಪಾದಕರ ವಿರುದ್ಧದ ಯುದ್ಧವನ್ನು ನಿಭಾಯಿಸಲು ಪ್ರಧಾನಿ ನೆತನ್ಯಾಹು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Israel-Gaza war : Thousands in Tel Aviv demand release of hostages held in Gaza
Protesters are demanding swift and effective action from the government to secure release of Hostages#IsraelHamasWar pic.twitter.com/PyqUjpssXq
— Sanatan Prabhat (@SanatanPrabhat) June 18, 2024
7 ಅಕ್ಟೋಬರ್, 2023 ರಂದು, ಹಮಾಸ್ ಭಯೋತ್ಪಾದಕರು 251 ಇಸ್ರೇಲಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅದರಲ್ಲಿ 116 ಜನರು ಇನ್ನೂ ಹಮಾಸ್ ವಶದಲ್ಲಿದ್ದಾರೆಂದು ಇಸ್ರೇಲ್ ಹೇಳಿಕೊಂಡಿದೆ.