ಗೋಹತ್ಯೆ ಮಾಡಿರುವ ಬಗ್ಗೆ ಹಿಂದೂಗಳು ಆರೋಪಿಸಿದಾಗ ದಾಳಿ !
ಪಾಕುರ (ಜಾರ್ಖಂಡ್) – ಬಕರೀದ್ದಿನದಂದು, ಮುಸಲ್ಮಾನರು ಗೋಹತ್ಯೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದಾಗ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರು. ನೆರೆದ ಮುಸಲ್ಮಾನರು ಹಿಂದೂಗಳ ಮನೆಯನ್ನು ಧ್ವಂಸಗೊಳಿಸಿದರು. ಹಾಗೆಯೇ ನಾಡ ಬಾಂಬ್ ಸಿಡಿಸಿದರು. ಈ ಹಿಂಸಾಚಾರವು ಜಾರ್ಖಂಡ ಗಡಿಗೆ ಹೊಂದಿಕೊಂಡಿರುವ ಬಂಗಾಳದ ಗಡಿಭಾಗದಿಂದ ಕರೆಸಲಾಗಿದ್ದ ಮುಸಲ್ಮಾನರು ನಡೆಸಿದ್ದಾರೆಂದು ಗ್ರಾಮಸ್ಥರು ತಿಳಿಸಿದರು.
1. ಗೋಪಿನಾಥಪುರ ಪ್ರದೇಶದ ಒಂದು ಭಾಗದಲ್ಲಿ ಗೋಹತ್ಯೆ ನಡೆಸುತ್ತಿರುವಾಗ ಭೂಮಿಯ ಮಾಲೀಕರು ಅದನ್ನು ವಿರೋಧಿಸಿದರು. ಇದರಿಂದ ಮುಸಲ್ಮಾನರು ಆಕ್ರೋಶಗೊಂಡರು ಮತ್ತು ಅವರು ಪಕ್ಕದ ಬಂಗಾಳ ರಾಜ್ಯದ ಗ್ರಾಮದಿಂದ ಮುಸಲ್ಮಾನರನ್ನು ಕರೆಸಿಕೊಂಡು ಹಿಂದೂಗಳ ಮೇಲೆ ದಾಳಿ ನಡೆಸಿದರು.
ಅವರು ಹಿಂದೂಗಳ ಮೇಲೆ ಕಲ್ಲು ಎಸೆಯುತ್ತಾ ನಾಡಬಾಂಬ್ ಸಿಡಿಸಿದರು. ಹಾಗೆಯೇ ಕೆಲವು ಮನೆಗಳನ್ನು ಧ್ವಂಸಗೊಳಿಸಿದರು. ಈ ಘಟನೆಯ ಮಾಹಿತಿ ಸಿಗುತ್ತಲೇ ಬಂಗಾಳ ಮತ್ತು ಜಾರ್ಖಂಡ ರಾಜ್ಯದ ಎರಡೂ ಪೊಲೀಸ್ ಪಡೆ ಘಟನಾ ಸ್ಥಳಕ್ಕೆ ತಲುಪಿತು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಿತು. ಸದ್ಯ ಈ ಭಾಗದಲ್ಲಿ ದೊಡ್ಡ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿದೆ.
2. ಈ ಪ್ರಕರಣವು ಎರಡು ಗ್ರಾಮಗಳ ನಡುವಿನ ಜಗಳವಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಒಂದು ಗ್ರಾಮ ಜಾರ್ಖಂಡದಲ್ಲಿದ್ದು, ಇನ್ನೊಂದು ಬಂಗಾಳದಲ್ಲಿದೆ. ಈ ಗ್ರಾಮಸ್ಥರ ನಡುವೆ ಕಲಹವಿದೆ ಎಂದಿದ್ದಾರೆ.
ನುಸುಳುಕೋರರು ಆದಿವಾಸಿಗಳ ಭೂಮಿಯನ್ನು ಕಬಳಿಸಿ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಿದ್ದಾರೆ – ಬಿಜೆಪಿ
ಈ ಘಟನೆಯ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ ಜಾರ್ಖಂಡ ಬಿಜೆಪಿ ಪ್ರದೇಶಾಧ್ಯಕ್ಷ ಬಾಬುಲಾಲ ಮರಾಂಡಿ ಮಾತನಾಡಿ, `ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಆಡಳಿತಾರೂಢ ಜಾರ್ಖಂಡ ಮುಕ್ತಿ ಮೋರ್ಚಾ ಸರಕಾರ ನುಸುಳುಕೋರರ ವಿರುದ್ಧ ಕ್ರಮ ಕೈಕೊಳ್ಳುತ್ತಿಲ್ಲ. ಈ ಪ್ರದೇಶದಲ್ಲಿ ನುಸುಳುಕೋರರು ಅವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಅವರು ಆದಿವಾಸಿಗಳ ಭೂಮಿಯನ್ನು ಕಬಳಿಸುವುದಲ್ಲದೇ ಮಹಿಳೆಯರ ಬಲಾತ್ಕಾರ ಮಾಡುತ್ತಿದ್ದಾರೆ. ಸ್ಥಳೀಯ ಜನರ ಸಂಪತ್ತಿನ ಮೇಲೆ ತಮ್ಮ ಅಧಿಕಾರವಿದೆಯೆಂದು ಹೇಳುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸರಕಾರ ಸುಮ್ಮನಿದೆ’ ಎಂದು ಆರೋಪಿಸಿದರು.
ಸಂಪಾದಕೀಯ ನಿಲುವುಬಕರೀದ್ ದಿನದಂದು ಮೇಕೆಗಳನ್ನು ಬಲಿ ಕೊಡುವ ಸಂಪ್ರದಾಯವಿರುವಾಗ ಗೋಹತ್ಯೆಯನ್ನು ಏಕೆ ಮಾಡಲಾಗುತ್ತದೆ? ಹಿಂದೂಗಳನ್ನು ಪ್ರಚೋದಿಸುವುದಕ್ಕಾಗಿಯೇ ಈ ರೀತಿ ಮಾಡಲಾಗುತ್ತದೆ. ಈ ಆತ್ಮಘಾತುಕ ಜಾತ್ಯಾತೀತತೆಯನ್ನು ರಕ್ಷಿಸುವ ಹಿಂದೂಗಳು ಇದನ್ನು ಎಂದಾದರೂ ಗಮನಿಸುವರೇ? |