ನಮಾಜ ವೇಳೆ ಶಿವಮಂದಿರದ ಧ್ವನಿವರ್ಧಕದಿಂದ ಧ್ವನಿ ಕೇಳಿಸಿದ್ದಕ್ಕೆ ಮುಸಲ್ಮಾನರಿಂದ ವಿರೋಧ

ದರಭಂಗಾ(ಬಿಹಾರ): ಬಕರೀದ್ ದಿನದ ಘಟನೆ

ದರಭಂಗಾ(ಬಿಹಾರ)- ದರಭಂಗಾ ಜಿಲ್ಲೆಯ ಜಮಾಲಪೂರದ ಒಂದು ಗ್ರಾಮದಲ್ಲಿ ಬಕರೀದ್ ದಿನದಂದು ನಮಾಜ ಪಠಣದ ವೇಳೆ ಅಲ್ಲಿಯ ಶಿವಮಂದಿರದಲ್ಲಿ `ಶಿವ ಚರ್ಚೆ’ ಎಂಬ ಕಾರ್ಯಕ್ರಮವನ್ನು ಧ್ವನಿವರ್ಧಕವನ್ನು ಹಚ್ಚಲಾಗಿತ್ತು. ಅದಕ್ಕೆ ಮುಸಲ್ಮಾನರು ವಿರೋಧಿಸಿದಾಗ ಹಿಂದೂ ಮತ್ತು ಮುಸಲ್ಮಾನರ ನಡುವೆ ವಾಗ್ವಾದ ನಡೆದು ಮುಸಲ್ಮಾನರು ಧ್ವನಿವರ್ಧಕವನ್ನು ತೆಗೆಯಲು ಪ್ರಯತ್ನಿಸಿದರು. ಇದರಿಂದ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಯಿತು. ಈ ಘಟನೆಯ ಮಾಹಿತಿ ಸಿಗುತ್ತಲೇ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ವಾಗ್ವಾದವನ್ನು ಹತೋಟಿಗೆ ತಂದರು. ಉದ್ವಿಗ್ನತೆಯ ಪರಿಸ್ಥಿತಿಯನ್ನು ಪರಿಶೀಲಿಸಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ ಹೆಚ್ಚಿಸಲಾಗಿದೆ.

ಸ್ಥಳೀಯ ಗ್ರಾಮಸ್ಥರಾದ ಸುಶೀಲ ಕುಮಾರ ಮಾತನಾಡಿ ‘ಸುಮಾರು 50 ಮುಸಲ್ಮಾನರು ದೇವಸ್ಥಾನದ ಮೇಲೆ ಹಚ್ಚಲಾಗಿದ್ದ ಧ್ವನಿವರ್ಧಕವನ್ನು ತೆಗೆಯಲು ಪ್ರಯತ್ನಿಸಿದಾಗ ಹಿಂದೂಗಳು ಅದನ್ನು ವಿರೋಧಿಸಿದರು. ಆಗ ಎರಡೂ ಕಡೆಯವರು ಪರಸ್ಪರ ವಸ್ತುಗಳನ್ನು ಎಸೆಯಲು ಪ್ರಾರಂಭಿಸಿದರು’ ಎಂದು ತಿಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.

ಸಂಪಾದಕೀಯ ನಿಲುವು

ನಮಾಜ ಪಠಣದ ವೇಳೆ ದೇವಸ್ಥಾನದ ಧ್ವನಿವರ್ಧಕದ ಧ್ವನಿಯನ್ನು ಸಹಿಸದಿರುವವರು ಪ್ರತಿದಿನ 5 ಸಲ ಮಶೀದಿಯ ಧ್ವನಿವರ್ಧಕದಿಂದ ಕೇಳಿಸುವ ಅಜಾನದಿಂದ ಹಿಂದೂಗಳಿಗೆ ಎಷ್ಟು ಸಹಿಸಬೇಕಾಗುತ್ತಿದೆ, ಎನ್ನುವ ವಿಚಾರ ಮಾಡುವರೇ?

ಹಿಂದೂ ಬಹುಸಂಖ್ಯರಾಗಿರುವ ದೇಶದಲ್ಲಿ ಆತ್ಮಘಾತುಕ ಜಾತ್ಯಾತೀತತೆಯ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷಗಳ ಕಾಲ ಮಶೀದಿ ಮೇಲಿನ ಈ ಧ್ವನಿವರ್ಧಕವನ್ನು ಹೀಗೆಯೇ ಮುಂದುವರಿಸುತ್ತಾರೆ?