|
ವೇಶಾವರ (ಪಾಕಿಸ್ತಾನ) – ಖೈಬರ ಪಕ್ಟುನಖ್ವಾ ಪ್ರಾಂತದಲ್ಲಿ ಆಲಮ್ ಸೈಯದನು ತನ್ನ ೧೨ ವರ್ಷದ ಹುಡುಗಿಯನ್ನು ೭೨ ವರ್ಷದ ಓರ್ವ ಮುದುಕನಿಗೆ ೫ ಲಕ್ಷ ರೂಪಾಯಿಗೆ ಮಾರಿದನು. ತಂದೆಯು ಸ್ವಂತ ಮಗಳನ್ನು ಆ ಮುದುಕನ ಜೊತೆಗೆ ವಿವಾಹ ಮಾಡಿಕೊಡುವ ಪ್ರಯತ್ನ ಕೂಡ ಮಾಡಿದನು. ಪೊಲೀಸರಿಗೆ ಮಾಹಿತಿ ಸಿಗುತ್ತಲೇ ಅವರು ವಿವಾಹವನ್ನು ತಡೆದು ಮುದುಕನನ್ನು ಬಂಧಿಸಿದರು. ಹುಡುಗಿಯ ತಂದೆ ಘಟನಾ ಸ್ಥಳದಿಂದ ಪರಾರಿ ಆಗಿದ್ದಾನೆ. ಪೊಲೀಸರು ಹುಡುಗಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಆರೋಪಿ ಮುದುಕ ಮತ್ತು ಆಲಮ ಸೈಯದ್ ನ ವಿರುದ್ಧ ಬಾಲ್ಯ ವಿವಾಹ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಪಾಕಿಸ್ತಾನದಲ್ಲಿ ಬಾಲ್ಯ ವಿವಾಹಕ್ಕೆ ಎಲ್ಲಕಿಂತ ದೊಡ್ಡ ಕಾರಣ ದಾರಿದ್ರ್ಯ ಎಂದು ನಂಬಿದ್ದಾರೆ. ಆದಿವಾಸಿ ಪ್ರದೇಶದಲ್ಲಿನ ಜನರು ೫ ಲಕ್ಷ ದಿಂದ ೨೦ ಲಕ್ಷ ರೂಪಾಯೇ ನೀಡಿ ಅಪ್ರಾಪ್ತ ಹುಡುಗಿಯರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾರೆ. ಇದರಲ್ಲಿ ಧಾರ್ಮಿಕ ನಾಯಕರು, ಆದಿವಾಸಿ ಮುಖ್ಯಸ್ಥರು ಮತ್ತು ರಾಜ್ಯ ಸರಕಾರ ಎಲ್ಲರೂ ಸಹಭಾಗಿ ಆಗಿರುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಬಾಲ್ಯ ವಿವಾಹದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ !
೧. ಸ್ವಾತ ನಗರ (ಖೈಬರ್ ಪಖ್ಟುನಖ್ವಾ ಪ್ರಾಂತ) : ಇಲ್ಲಿ ಮೇ ೬, ೨೦೨೪ ರಂದು ಓರ್ವ ವ್ಯಕ್ತಿಯು ತನ್ನ ೧೩ ವರ್ಷದ ಹುಡುಗಿಯನ್ನು ಓರ್ವ ೭೦ ವರ್ಷದ ವ್ಯಕ್ತಿಯ ಜೊತೆಗೆ ಮದುವೆ ಮಾಡಿಕೊಟ್ಟರು. ಪೊಲೀಸರು ತಂದೆ ಮತ್ತು ವರನನ್ನು ಬಂಧಿಸಿದರು.
೨. ಥಟ್ಟ ನಗರ (ಸಿಂಧ ಪ್ರಾಂತ) : ಇಲ್ಲಿ ಓರ್ವ ಅಪ್ರಾಪ್ತ ಹುಡುಗಿಯನ್ನು ೫೦ ವರ್ಷದ ಮನೆಯ ಮಾಲೀಕನ ಜೊತೆಗೆ ಬಲವಂತವಾಗಿ ವಿವಾಹ ಮಾಡಿಕೊಡಲಾಗಿತ್ತು. ಅದರ ನಂತರ ಪೊಲೀಸರು ಹುಡುಗಿಯನ್ನು ಬಿಡುಗಡೆಗೊಳಿಸಿದರು.
೩. ರಾಜನಪುರ ನಗರ (ಪಂಜಾಬ ಪ್ರಾಂತ) : ಓರ್ವ ೧೧ ವರ್ಷದ ಹುಡುಗಿಯನ್ನು ೪೦ ವರ್ಷದ ವ್ಯಕ್ತಿಯ ಜೊತೆಗೆ ವಿವಾಹ ನಡೆಯಿತು.
೪. ೨೦೧೧ ರಲ್ಲಿ ಇಮ್ರಾನ್ ಖಾನ್ ಇವರ ಅಧಿಕಾರ ಕಾಲದಲ್ಲಿ ೬೪ ವರ್ಷದ ಶಾಸಕ ಮೌಲಾನಾ ಸಲಾವುದ್ದೀನ್ ಆಯುಬಿ ಇವರ ೧೪ ವರ್ಷದ ವರ್ಷ ಹುಡಗಿಯೊಂದಿಗೆ ವಿವಾಹ ಆಗಿತ್ತು.*
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಗಟಿಸುತ್ತವೆ. ಇದರ ಹಿಂದೆ ದಾರಿದ್ರ್ಯ ಎಂದು ಹೇಳಲಾಗುತ್ತದೆ; ಆದರೆ ದಾರಿದ್ರ್ಯ ಭಾರತದಲ್ಲಿ ಕೂಡ ಇದೆ, ಆದರೂ ಈ ರೀತಿಯ ಘಟನೆ ಇಲ್ಲಿ ಘಟಿಸಿರುವದರ ಕುರಿತು ಎಂದು ಕೇಳಿಲ್ಲ. ಆದ್ದರಿಂದ ಇಂತಹ ಘಟನೆಗಳ ಹಿಂದೆ ಪಾಕಿಸ್ತಾನದ ಧಾರ್ಮಿಕ ವಿಚಾರಧಾರೆಯೇ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ! |