ಪ್ರತಿ ತಿಂಗಳು 200ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಭಾರತಕ್ಕೆ ನುಸುಳುತ್ತಿದ್ದಾರೆ !

  • 14 ರಾಜ್ಯಗಳಲ್ಲಿ ಖಾಯಂ ರೂಪದಲ್ಲಿ ವಾಸ್ತವ್ಯ! 

  • 2017ರ ವರೆಗೆ  40 ಸಾವಿರ ರೋಹಿಂಗ್ಯಾಗಳು ನುಸುಳಿದ್ದರು. 

ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ಷಾಂತರ ರೋಹಿಂಗ್ಯಾ ನುಸುಳುಕೋರ ಮುಸ್ಲಿಮರನ್ನು ಹೊರಹಾಕಲು ಭಾರತ ಸರಕಾರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.  2017ರ ವೇಳೆಗೆ ನುಸುಳುಕೋರರ ಸಂಖ್ಯೆ 40 ಸಾವಿರದಷ್ಟಿತ್ತು. ಇದು 2012 ರಿಂದ 2017 ರ ಅವಧಿಯಲ್ಲಿ ಅನೇಕ ಪಟ್ಟು ಹೆಚ್ಚಾಗಿದೆ. ಈಗ ಹೊಸ ಮಾಹಿತಿಯ ಪ್ರಕಾರ ಪ್ರತಿ ತಿಂಗಳು 200ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುತ್ತಿದ್ದಾರೆ ಎಂದು ಬೆಳಕಿಗೆ ಬಂದಿದೆ.

ಈ ನುಸುಳುಕೋರರು ಆಸ್ಸಾಂ, ಬಂಗಾಳ, ತ್ರಿಪುರ, ಮಿಜೋರಾಂ, ಮೇಘಾಲಯ, ಜಮ್ಮು-ಕಾಶ್ಮೀರ, ಹರಿಯಾಣ, ಪಂಜಾಬ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ, ಕೇರಳ ಈ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಶಾಶ್ವತವಾಗಿ ವಾಸ್ತವ್ಯ ಹೊಂದಿದ್ದಾರೆ. ಈ ಅಕ್ರಮ ಕೆಲಸಗಳನ್ನು ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಗುಂಪು ಮಾಡುತ್ತಿದೆ.

ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಬೆಚ್ಚಿಬೀಳಿಸುವಂತಹ ವಿಷಯ ಬಹಿರಂಗ

ಇತ್ತೀಚೆಗೆ  ರಾಷ್ಟ್ರೀಯ ತನಿಖಾ ದಳವು  ಮಾನವ ಕಳ್ಳಸಾಗಣೆ ಗುಂಪಿನ  ಮುಖ್ಯಸ್ಥ ಜಲೀಲ ಮಿಯಾಂನನ್ನು ಬಂಧಿಸಿತ್ತು. ಆತನ ವಿಚಾರಣೆಯಲ್ಲಿ  ಮುಂದಿನ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

1. ಜಲೀಲ್ ಮಿಯಾನ್ ತ್ರಿಪುರಾ ನಿವಾಸಿಯಾಗಿದ್ದು, ಆತನ ಸಹಚರರಾದ ಮಿಯಾಂ ಮತ್ತು ಶಾಂತೊ  ಇನ್ನೂ ತಲೆಮರೆಸಿಕೊಂಡಿದ್ದಾರೆ.

2. ಪೊಲೀಸರು ಮಿಯಾಂನ ತನಿಖೆ ನಡೆಸಿದ ನಂತರ, ಆತನ ಗುಂಪಿನ  29 ಜನರನ್ನು ಬಂಧಿಸಲಾಯಿತು.

3. ಭಾರತದಲ್ಲಿ ನೆಲೆಸಲು ಬಯಸುವ ರೋಹಿಂಗ್ಯಾ ಮುಸ್ಲಿಮರಿಗೆ ರೂ 10 ರಿಂದ 20 ಲಕ್ಷ (14 ರಿಂದ 28 ಲಕ್ಷ ಬಾಂಗ್ಲಾದೇಶಿ ಟಾಕಾ) ನೀಡಲಾಗುತ್ತದೆ. ಹಾಗೆಯೇ ಅವರಿಗೆ ಗಡಿಯಾಚೆಗಿನ  ನಕಲಿ ಭಾರತೀಯ ಗುರುತಿನ ಚೀಟಿಯೊಂದಿಗೆ ಭಾರತಕ್ಕೆ ಕರೆತರಲಾಗುತ್ತದೆ.

4. ಅವರಿಗೆ ಭಾರತೀಯ ಉಚ್ಚಾರಣೆಯೊಂದಿಗೆ ಹಿಂದಿ ಮಾತನಾಡಲು ತರಬೇತಿ ನೀಡಲಾಗುತ್ತದೆ. ರೋಹಿಂಗ್ಯಾ ನುಸುಳುಕೋರರು ಭಾರತಕ್ಕೆ ಬಂದ ಬಳಿಕ ಅವರ ಉಚ್ಚಾರಣೆಯಿಂದ ಅವರ ನುಸುಳುಕೋರರೆಂದು ಜನರು ಗುರುತಿಸಬಾರದೆಂದು ಅವರಿಗೆ ಅಸ್ಸಾಮಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಲು ತರಬೇತಿ ನೀಡಲಾಗುತ್ತದೆ.

5. ಪ್ರತಿದಿನ 5 ರಿಂದ 10 ರೋಹಿಂಗ್ಯಾಗಳು ಭೂಗತ ಸುರಂಗದಿಂದ ಭಾರತದೊಳಗೆ ನುಸುಳುತ್ತಾರೆ. ಇದಕ್ಕಾಗಿ ಅಸ್ಸಾಂ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರಾ ಈ ರಾಜ್ಯಗಳ ಅಂತರಾಷ್ಟ್ರೀಯ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭೂಗತ ಸುರಂಗಗಳನ್ನು ನಿರ್ಮಿಸಲಾಗಿದೆ.

6. ಭಾರತದೊಳಗೆ ನುಸುಳಿದ ನಂತರ ರಾಜಧಾನಿ ದೆಹಲಿ ರೋಹಿಂಗ್ಯಾಗಳ ಪ್ರಮುಖ ತಾಣವಾಗಿರುತ್ತದೆ. ರೋಹಿಂಗ್ಯಾಗಳು ದೆಹಲಿಯ ಜಸೋಲಾ, ಯಮುನಾ ನದಿಯ ದಡದಲ್ಲಿ, ಶ್ರಮ ವಿಹಾರ, ಕಾಂಚನ ವಿಹಾರ ಮತ್ತು ಮದನಪುರ ಖಾದರನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತವಾಗಿ ವಾಸಿಸುತ್ತಾರೆ.

ಸಂಪಾದಕೀಯ ನಿಲುವು

  • ಮ್ಯಾನ್ಮಾರ್ ಮತ್ತು ಚೀನಾ ದೇಶಗಳು ಮುಸ್ಲಿಮರಿಗೆ ಯಾವ ರೀತಿಯ ಆತಿಥ್ಯವನ್ನು ನೀಡುತ್ತವೆ ಎಂಬುದು ಜಗಜ್ಜಾಹೀರಾಗಿದೆ. ಭಾರತವೂ ಕೂಡ ಈ ನುಸುಳುಕೋರರನ್ನು ಅವರ ತಾಯ್ನಾಡಿಗೆ ಮರಳಿ ಕಳುಹಿಸಬೇಕು, ಇಲ್ಲದಿದ್ದರೆ ಭಾರತ ‘ಇಸ್ಲಾಮಿಸ್ತಾನ’ವಾಗುವ ದಿನ ದೂರವಿಲ್ಲ. 
  • ಕೇಂದ್ರ ಸರ್ಕಾರ ಈಗಲಾದರೂ ಆದ್ಯತೆಯ ಮೇಲೆ ದೇಶಾದ್ಯಂತ ‘ರಾಷ್ಟ್ರೀಯ ಪೌರತ್ವ ನೋಂದಣಿ’ (‘ಎನ್‌ಆರ್‌ಸಿ’) ಪ್ರಕ್ರಿಯೆಯನ್ನು ಪ್ರಾರಂಭಿಸಿ, ಎಲ್ಲಾ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಕಂಡು ಹಿಡಿದು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.