Theft in the Temple : ಕೊಲ್ಲಾಪುರ: ಗ್ರಾಮ ದೇವ ಕಪಿಲೇಶ್ವರ ದೇವಸ್ಥಾನದಲ್ಲಿ ಕಳ್ಳತನ !

ಬೆಳ್ಳಿಯ ಮುಖವಾಡದೊಂದಿಗೆ ಎಪ್ಪತೈದು ಲಕ್ಷ ಮೌಲ್ಯದ ವಸ್ತು ಕಳ್ಳತನ !

ಕೊಲ್ಲಾಪುರ – ಕೊಲ್ಲಾಪುರದ ಗ್ರಾಮ ದೇವ ಕಪಿಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮುಕ್ಕಾಲು ಕಿಲೋ ತೂಕದ ಬೆಳ್ಳಿಯ ಮುಖವಾಡ, ತಾಮ್ರದ ಅಭಿಷೇಕ ಪಾತ್ರೆ, ನಂದಾದೀಪ, ಹಾಗೆಯೇ ಪೂಜೆಯ ಅನ್ಯ ಸಾಮಗ್ರಿಗಳು, ಹೀಗೆ ಎಪ್ಪತೈದು ಲಕ್ಷ ರೂಪಾಯಿಗಳ ಸಾಮಗ್ರಿಗಳು ಕಳ್ಳತನವಾಗಿದೆ. ದೇವಸ್ಥಾನದ ಪೂಜಾರಿ ಗಿರಿಜಾ ಧರ್ಮಾಧಿಕಾರಿ ಅವರು ಜುನಾ ರಾಜವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಸಿ.ಸಿ.ಟಿ.ವಿ.’ಯಲ್ಲಿನ ದೃಶ್ಯಾವಳಿಗಳ ಮೂಲಕ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಪಿಲೇಶ್ವರ ದೇವಾಲಯವು ಪುರಾತನವಾದ ಶಿವನ ದೇವಾಲಯವಾಗಿದ್ದು ಪೂರ್ವಾಭಿಮುಖವಾಗಿದೆ. ದೇವಾಲಯದ ಹೊರ ಭಾಗದಲ್ಲಿ ಮಹೇಶ್ವರಿ ದೇವಿ ಮತ್ತು ಶ್ರೀ ಹನುಮಾನ್ ವಿಗ್ರಹಗಳಿವೆ.