G7 Nations : ಭಾರತ-ಮಧ್ಯಪೂರ್ವ-ಯುರೋಪ್’, ಈ ಔದ್ಯೋಗಿಕ ಮಾರ್ಗದ ನಿರ್ಮಾಣಕ್ಕಾಗಿ ವಚನಭದ್ಧ ! – ‘ಜಿ ೭’ ರಾಷ್ಟ್ರಗಳು

ರೈಲು ಮಾರ್ಗ ಮತ್ತು ಬಂದರಗಳ ಮೂಲಕ ಭಾರತ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಇವುಗಳೊಂದಿಗೆ ಸಂಪರ್ಕಿಸಬಹುದು !

ಅಪುಲಿಯ (ಇಟಲಿ) – ಭಾರತ, ಪಶ್ಚಿಮ ಏಷಿಯಾ ಮತ್ತು ಯುರೋಪ್ ಇವುಗಳನ್ನು ಸೇರಿಸುವ ಮಹತ್ವಾಕಾಂಕ್ಷಿ ‘ಆಯಮೆಕ ಕಾರಿಡಾರ್’ ಈ ವಾಣಿಜ್ಯ ಹೆದ್ದಾರಿಯ ನಿರ್ಮಾಣಕ್ಕಾಗಿ ವಚನಭದ್ಧ ಇರುವುದಾಗಿ ೭ ವಾಣಿಜ್ಯ ರಾಷ್ಟ್ರಗಳ (‘ಜಿ ೭’ ನ) ಸಮೂಹವು ಇಲ್ಲಿಯ ಶೃಂಗ ಸಭೆಯಲ್ಲಿ ಹೇಳಿದೆ. ‘ಜಾಗತಿಕ ಮೂಲಭೂತ ಸೌಲಭ್ಯಗಳು ಮತ್ತು ಬಂಡವಾಳ ಹೂಡಿಕೆ ಇವುಗಳಿಗೆ ಚಾಲನೆ ನೀಡುವ ಯೋಜನೆ ಅಭಿವೃದ್ಧಿ ಗೊಳಿಸುವುದಕ್ಕಾಗಿ ಪೂರಕ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವೆವು’, ಎಂದು ಕೂಡ ‘ಜಿ ೭’ ರಾಷ್ಟ್ರಗಳು ಈ ಸಮಯದಲ್ಲಿ ನಮೂದಿಸಿದವು.

ಇತ್ತೀಚೆಗೆ ‘ಜಿ ೭’ ಶೃಂಗಸಭೆಯು ದಕ್ಷಿಣ ಇಟಲಿಯಲ್ಲಿನ ಅಪುಲಿಯ ನಗರದಲ್ಲಿ ನೆರವೇರಿತು. ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಇವರ ವಿಶೇಷ ಆಮಂತ್ರಣದ ಮೇರೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಸಭೆಗೆ ಉಪಸ್ಥಿತರಾಗಿದ್ದರು. ಸಪ್ಟೆಂಬರ್ ೨೦೨೩ ರಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ ೨೦’ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರು ಈ ಯೋಜನೆಯ ಘೋಷಣೆ ಮಾಡಿದ್ದರು.

ಏನಿದು, ‘ಐಮೇಕ್ ಕಾರಿಡಾರ್’ ?

‘ಐಮೇಕ್ ಕಾರಿಡಾರ್’ ಎಂದರೆ ಇಂಡಿಯಾ-ಮಿಡಲ್ ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್ (ಭಾರತ ಮಧ್ಯಪೂರ್ವ ಯೂರೋಪ್ ಸಾರಿಗೆ ಮಾರ್ಗ) ಆಗಿದೆ. ಈ ಯೋಜನೆಯ ಮೂಲಕ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಗೆ ರೈಲು ಮಾರ್ಗ ಮತ್ತು ಬಂದರುಗಳ ಮೂಲಕ ಭಾರತಕ್ಕೆ ಜೋಡಿಸುವ ಪ್ರಯತ್ನ ಮಾಡಲಾಗುವುದು. ಯೋಜನೆಯಲ್ಲಿ ಭಾರತ ಸಹಿತ ಸಂಯುಕ್ತ ಅರಾಬ್ ಅಮಿರೆಟ್ಸ್, ಸೌದಿ ಅರೇಬಿಯಾ, ಯುರೋಪಿಯನ್ ಮಹಾಸಂಘ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕಾ ಈ ದೇಶಗಳ ಸಮಾವೇಶವಿದೆ. ಈ ಯೋಜನೆಯನ್ನು ಕುಖ್ಯಾತ ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ ಹಾಗೂ ‘ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್’ ಈ ಯೋಜನೆಗೆ ಸವಾಲು ಹಾಕುವುದಕ್ಕಾಗಿ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ವಿಶೇಷವೆಂದರೆ ಕಳೆದ ವರ್ಷ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ದಿಂದ ಇಟಲಿ ಹೊರಗೆ ಬಂದಿರುವುದರಿಂದ ಚೀನಾಗೆ ಅದು ಆಘಾತವಾಗಿದೆ ಎಂದು ಹೇಳಲಾಗುತ್ತಿದೆ.