‘ದೇವರ ಕುರಿತು ಹಾಸ್ಯ ಮಾಡುವುದು ದೇವರ ನಿಂದನೆ ಅಲ್ಲವಂತೆ ! – ಪೋಪ್ ಫ್ರಾನ್ಸಿಸ್

ಕಲಾವಿದರ ಜೊತೆಗೆ ನಡೆದಿರುವ ಚರ್ಚೆಯಲ್ಲಿ ಮಂಡಿಸಿದ ಅಭಿಪ್ರಾಯ

ರೋಮ್ – ಕ್ರೈಸ್ತರ ಸರ್ವೋಚ್ಚ ಗುರು ಪೋಪ್ ಫ್ರಾನ್ಸಿಸ್ ಇವರು ಅಮೆರಿಕಾ ಮತ್ತು ಯುರೋಪ್ ಇಲ್ಲಿಯ ಪ್ರಸಿದ್ಧ ೧೦೦ ಕಲಾವಿದರ ಜೊತೆ ಸಂವಾದ ನಡೆಸಿದರು. ಇವರಲ್ಲಿ ಹಾಸ್ಯ ಕಲಾವಿದರು, ನಟರು ಮತ್ತು ಲೇಖಕರ ಸಮಾವೇಶವಿತ್ತು. ಅಮೇರಿಕಾದಲ್ಲಿನ ಹೆಸರಾಂತ ಕಲಾವಿದ ಹೂಪಿ ಗೋಲ್ಡ್ ಬರ್ಗ್, ಜಿಮಿ ಪ್ಯಾಲೆನ್, ಕಾನನ ಒಬ್ರಯನ್, ಖ್ರಿಸ್ ರಾಕ್ ಮತ್ತು ಸ್ಟೀಫನ್ ಕೋಲ್ಬರ್ಟ್ ಇವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಹಾಸ್ಯ ಕಲಾವಿದರು ಕೇಳಿರುವ ಪ್ರಶ್ನೆಗೆ ಪೋಪ್ ಫ್ರಾನ್ಸಿಸ್ ಇವರು ಉತ್ತರ ನೀಡಿದರು. ‘ನಾವು ದೇವರ ಕುರಿತು ಹಾಸ್ಯ ಮಾಡಬಹುದೇ ?’, ಎಂದು ಪೋಪ್ ಇವರಿಗೆ ಪ್ರಶ್ನೆ ಕೇಳಿದಾಗ ಅವರು, ದೇವರ ಕುರಿತು ಹಾಸ್ಯ ಮಾಡುವುದು, ಇದು ದೇವರ ನಿಂದನೆ ಆಗುವುದಿಲ್ಲ. ಹೇಗೆ ನಾವು ನಮ್ಮ ಹತ್ತಿರದ ಜನರ ಬಗ್ಗೆ ವಿನೋದ ಮಾಡುತ್ತೀರಿ, ಹಾಗೆ ದೇವರು ಕೂಡ ಇರುವನು.” ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ಮಾತು ಮುಂದುವರಿಸಿ ,

೧. ಒಳ್ಳೆಯ ಹಾಸ್ಯವು ಜನರನ್ನು ಅವಮಾನಿಸದೇ ಇದ್ದರೆ ಅಥವಾ ಯಾರಲ್ಲಿ ಕೊರತೆಯ ಭಾವನೆ ನಿರ್ಮಾಣ ಮಾಡುವುದಿಲ್ಲ. ಜ್ಯೂ ಧರ್ಮದ ಸಾಹಿತ್ಯದಲ್ಲಿ ಒಳ್ಳೆಯ ವಿನೋದದ ಅನೇಕ ಉದಾಹರಣೆಗಳು ಇವೆ.
೨. ನಾನು ಈಗ ಏನು ಹೇಳುತ್ತಿದ್ದೇನೆ, ಅದು ಎಂದರೆ ಅಸತ್ಯವಲ್ಲ. ನೀವು (ಕಲಾವಿದರು) ಯಾವಾಗ ಅಸಂಖ್ಯ ಜನರ ಮುಖಗಳ ಮೇಲೆ ಹಾಸ್ಯ ಮೂಡಿಸುವ ಪ್ರಯತ್ನ ಮಾಡುತ್ತೀರಾ, ಆಗ ನೀವು ತನ್ನಿಂದ ತಾನೇ ದೇವರನ್ನು ಕೂಡ ನಗಿಸುತ್ತೀರಾ.

ಸಂಪಾದಕೀಯ ನಿಲುವು

ಪೋಪ್ ಇವರ ಮಾತು ಕೇಳಿ ಕ್ರೈಸ್ತರು ಏಸು ಕ್ರೈಸ್ತ ಅಥವಾ ಮದರ್ ಮೇರಿಯ ಚೇಷ್ಟೇ ಅಥವಾ ಅವರ ಬಗ್ಗೆ ವಿನೋದ ಮಾಡಿದರೆ, ಆಗ ಅದು ಅವರ ಪ್ರಶ್ನೆಯಾಗಿದೆ; ಆದರೆ ಪೋಪ್ ಇವರ ಮಾತು ಕೇಳಿ ಜಗತ್ತಿನಾದ್ಯಂತದಲ್ಲಿನ ಕಲಾಕಾರರು ಹಿಂದೂ ದೇವತೆ ಅಥವಾ ಸಂತರ ಅವಮಾನ ಮಾಡಿದರೆ ಹಿಂದುಗಳು ಇದನ್ನು ಎಂದಿಗೂ ಸ್ವೀಕರಿಸಲಾರರು, ಇದು ಕೂಡ ಅಷ್ಟೇ ಸತ್ಯ !