ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಮಂಡಿಸಿರುವ ೨೦೨೪-೨೫ರ ಮುಂಗಡ ಬಜೆಟ್ ನಲ್ಲಿ ಹಿಂದೂ ಮತ್ತು ಕ್ರೈಸ್ತರಂತಹ ಅಲ್ಪಸಂಖ್ಯಾತರಿಗಾಗಿ ಯಾವುದೇ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿಲ್ಲ. ಹಾಗೂ ಒಂದು ರೂಪಾಯಿ ಕೂಡ ಅಲ್ಪಸಂಖ್ಯಾತರಿಗಾಗಿ ಮೀಸಲಾಗಿಡಲಿಲ್ಲ. ಕಳೆದ ವರ್ಷದ ಬಜೆಟಿನಲ್ಲಿ ಕೂಡ ನೆಪ ಮಾತ್ರವಾಗಿ ಅಲ್ಪಸಂಖ್ಯಾತರಿಗಾಗಿ ೧೦ ಕೋಟಿ ಪಾಕಿಸ್ತಾನಿ ರೂಪಾಯಿಯ ವ್ಯವಸ್ಥೆ ಮಾಡಿತ್ತು. ಈ ಬಾರಿ ಬಜೆಟಿನಲ್ಲಿ ಅಂತಹ ಯಾವುದೇ ವ್ಯವಸ್ಥೆ ಮಾಡದೆ ಮುಸಲ್ಮಾನ ಮೂಲಭೂತವಾದಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕಾರ್ಯನಿರತವಾಗಿರುವ ಧಾರ್ಮಿಕ ವ್ಯವಹಾರ ಸಚಿವಾಲಯಕ್ಕಾಗಿ ಮಾತ್ರ ಹಣ ಹೆಚ್ಚಿಸಲಾಗಿದೆ.
ಮಾನವಾಧಿಕಾರಕ್ಕಾಗಿ ಇರುವ ಬಜೆಟಿನಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ .೨೦೨೪ – ೨೫ರಲ್ಲಿ ೧೦ ಕೋಟೆ ೪೦ ಲಕ್ಷ ಪಾಕಿಸ್ತಾನಿ ರೂಪಾಯಿಯ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಈ ಮೊತ್ತವು 1 ಕೋಟಿ ರೂ. ಗಳಷ್ಟಿತ್ತು.
ಸಂಪಾದಕೀಯ ನಿಲುವುಭಾರತದಲ್ಲಿನ ಮುಸಲ್ಮಾನರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಅಪಪ್ರಚಾರ ಮಾಡುವ ಪಾಕಿಸ್ತಾನದಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತರನ್ನು ಅಲ್ಲಿನ ಸರಕಾರ ಭಿಕ್ಷುಕರಿಗಿಂತಲೂ ಕೆಳಮಟ್ಟದಲ್ಲಿ ನೋಡುತ್ತಿದೆ. ಈ ಬಗ್ಗೆ ಭಾರತ ಧ್ವನಿ ಎತ್ತುವುದು ಅವಶ್ಯಕವಾಗಿದೆ ! |