India Reiterates to Pak and China : ಜಮ್ಮು-ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ !

ಪಾಕ್-ಚೀನಾಕ್ಕೆ ಭಾರತದ ಪ್ರತ್ತ್ಯುತ್ತರ !

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ನವದೆಹಲಿ – ಕಾಶ್ಮೀರದ ವಿಚಾರದಲ್ಲಿ ಯಾವುದೇ ದೇಶಕ್ಕೆ ಪ್ರತಿಕ್ರಿಯಿಸುವ ಅಥವಾ ಹಸ್ತ ಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಭಾರತವು ಪಾಕಿಸ್ತಾನ ಮತ್ತು ಚೀನಾಗೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ೫ ದಿನಗಳ ಕಾಲ ಚೀನಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಎರಡೂ ದೇಶಗಳು ಕಾಶ್ಮೀರದ ಬಗ್ಗೆ ಜಂಟಿ ಹೇಳಿಕೆ ಪ್ರಸಾರ ಮಾಡಿದ್ದವು. ಜಮ್ಮು-ಕಾಶ್ಮೀರದಲ್ಲಿ ಭಾರತದ ಏಕಪಕ್ಷೀಯ ಕ್ರಮದ ವಿರುದ್ಧ ಮಾತನಾಡಿದ ಚೀನಾ, “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬೇಕು” ಎಂದು ಹೇಳಿತ್ತು. ಅದಕ್ಕೆ ಭಾರತ ಈ ಮೇಲಿನಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಅಂಗವಾಗಿದೆ ಹಾಗೂ ಭವಿಷ್ಯದಲ್ಲಿಯೂ ಭಾರತದ ಭಾಗವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯವು ಖಡಕ್ ಆಗಿ ಹೇಳಿತ್ತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿಯ ಕೆಲವು ಕೆಲಸವನ್ನು ಪಾಕಿಸ್ತಾನ ಮಾಡಲಿಕ್ಕಿದೆ. ಈ ಪ್ರದೇಶದಲ್ಲಿ ನಡೆಯುವ ಯಾವುದೇ ಕೆಲಸಕ್ಕೆ ಭಾರತದ ವಿರೋಧವಿದೆ ಎಂದು ಸಚಿವಾಲಯ ನೇರವಾಗಿ ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಚೀನಾಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರಿಸುವುದು ಅವಶ್ಯಕವಾಗಿದೆ !