Pakistan India Relation : ಕಳೆದ ೫ ವರ್ಷದಲ್ಲಿ ಕಾಶ್ಮೀರದ ೧೩ ಸಾವಿರ ಹುಡುಗರನ್ನು ಭಾರತ ನಾಪತ್ತೆ ಮಾಡಿದೆಯಂತೆ !

  • ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಕಾಶ್ಮೀರದ ಅಂಶ ಎತ್ತಿದ ಪಾಕ್

  • ವಿಶ್ವಸಂಸ್ಥೆಯು ಗಮನ ನೀಡದಿದ್ದಕ್ಕೆ ಟೀಕೆ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಅಂಶಗಳನ್ನು ಎತ್ತಿದೆ. ನಾವು ಎತ್ತಿರುವ ಅಂಶಗಳ ಕಡೆಗೆ ವಿಶ್ವಸಂಸ್ಥೆ ಗಮನ ನೀಡಿಲ್ಲ ಎಂದು ಪಾಕಿಸ್ತಾನ ಟೀಕಿಸಿದೆ. ಯುದ್ಧ ಪೀಡಿದ ಪ್ರದೇಶದಿಂದ ನಾಗರೀಕರು ನಾಪತ್ತೆ ಆಗಿರುವ ಅಂಶದ ಬಗ್ಗೆ ಚರ್ಚೆಯ ಸಮಯದಲ್ಲಿ ಪಾಕಿಸ್ತಾನ ಈ ಅಂಶಗಳನ್ನು ಮಂಡಿಸಿತ್ತು. ಆಗಸ್ಟ್ ೨೦೧೯ ರಿಂದ ಭಾರತೀಯ ಸುರಕ್ಷಾ ದಳದಿಂದ ಕಾಶ್ಮೀರದಲ್ಲಿ ೧೩ ಸಾವಿರ ಹುಡುಗರು ನಾಪತ್ತೆ ಆಗಿದ್ದಾರೆ ಆದರೆ ಜಗತ್ತು ಈ ಬಗ್ಗೆ ಮೌನವಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ .

ಪಾಕಿಸ್ತಾನದ ಪ್ರತಿನಿಧಿ ಹೇಳಿದ್ದು:

೧. ಕಾಶ್ಮೀರದಲ್ಲಿ ಭಾರತೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಏನು ಮಾಡುತ್ತಿವೆ ಎಂಬುದನ್ನು ಭಯಾನಕ ಎಂದು ವರ್ಗೀಕರಿಸಬಹುದು. ಸಾವಿರಾರು ಕಾಶ್ಮೀರಿ ಯುವಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

೨. ಕಾಶ್ಮೀರದಲ್ಲಿ ಯಾವ ರೀತಿ ಜನರು ನಿರಂತರವಾಗಿ ಅಪಹರಣಕ್ಕೆ ಒಳಗಾಗುತ್ತಿದ್ದಾರೆ, ಅದು ಬಹಳ ಗಂಭೀರವಾಗಿದೆ. ಕಾಶ್ಮೀರದಲ್ಲಿ ಸಾವಿರಾರು ಮಹಿಳೆಯರಿಗೆ ಅವರ ಪತಿ ಬದುಕಿದ್ದಾರೆ ಅಥವಾ ಇಲ್ಲವೇ? ಎಂಬುದು ಕೂಡ ತಿಳಿದಿಲ್ಲ. ಅಂತಹ ಮಹಿಳೆಯರನ್ನು ಕಾಶ್ಮೀರದಲ್ಲಿ ‘ಅರ್ಧ ವಿಧವೆ’ ಎಂದು ಕರೆಯುತ್ತಾರೆ. ಇದು ಒಂದು ಗಂಭೀರ ಮಾನವೀಯ ಸಮಸ್ಯೆ ಆಗಿದೆ. ವಿಶ್ವಸಂಸ್ಥೆ ಮತ್ತು ಮಾನವಾಧಿಕಾರ ಸಂಘಟನೆಯು ಇದರ ಕಡೆಗೆ ಗಮನ ಹರಿಸಬೇಕೆಂದು, ನಮ್ಮ ಆಸೆಯಾಗಿದೆ. ಈ ಬಗ್ಗೆ ಇನ್ನೂ ಗಂಭೀರವಾಗಿ ಚರ್ಚೆ ನಡೆದಿಲ್ಲ, ಎಂದೇ ಹೇಳಬೇಕಾಗುವುದು. ಸಶಸ್ತ್ರ ಸಂಘರ್ಷದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಅಂಶಗಳ ಬಗ್ಗೆ ಅಂತರಾಷ್ಟ್ರೀಯ ಕಾನೂನು ಮತ್ತು ಜವಾಬ್ದಾರಿ ನಿಶ್ಚಿತಗೊಳಿಸುವ ಪ್ರಕ್ರಿಯೆ ಕಠಿಣ ಕಾರ್ಯಾಚರಣೆ ಅವಶ್ಯಕತೆ ಇದೆ.

ಸಂಪಾದಕೀಯ ನಿಲುವು

ಕಳೆದ ೩೪ ವರ್ಷಗಳಿಂದ ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಪಾಕಿಸ್ತಾನದಲ್ಲಿ ಸಾವಿರಾರು ಜನರ ಹತ್ಯೆಗಳು ನಡೆದಿವೆ, ಹಾಗೂ ನಾಲ್ಕೂವರೆ ಲಕ್ಷ ಹಿಂದುಗಳು ಪಲಾಯನ ಮಾಡಬೇಕಾಯಿತು, ಇದರ ಬಗ್ಗೆ ಪಾಕಿಸ್ತಾನ ಏಕೆ ಮಾತನಾಡುವುದಿಲ್ಲ ?