Jammu Kashmir Terror Attack : ಕಥುವಾದಲ್ಲಿ 2 ಸೈನಿಕರು ಹುತಾತ್ಮ, ದೋಡಾದಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ!

ಜಮ್ಮು-ಕಾಶ್ಮೀರ : 3 ದಿನಗಳಲ್ಲಿ 3 ಭಯೋತ್ಪಾದಕರ ದಾಳಿ !

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದಲ್ಲಿ ಕಳೆದ 3 ದಿನಗಳಲ್ಲಿ 3 ಭಯೋತ್ಪಾದಕ ದಾಳಿಗಳು ನಡೆದಿವೆ. ಜೂನ್ 9 ರ ಸಂಜೆ ಜಮ್ಮುವಿನ ರಿಯಾಸಿಯಲ್ಲಿ ನಡೆದ ದಾಳಿಯಲ್ಲಿ 9 ಹಿಂದೂಗಳು ಸಾವನ್ನಪ್ಪಿದ್ದರು. ಅದರ ನಂತರ, ಈಗ ಡೋಡಾ ಜಿಲ್ಲೆಯ ಸೇನಾ ತಾತ್ಕಾಲಿಕ ನೆಲೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಭಾರತೀಯ ಸೇನೆಯು ಪ್ರತ್ಯುತ್ತವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ ಮತ್ತು ಓರ್ವ ವ್ಯಕ್ತಿಗೆ ಗಾಯವಾಗಿದೆ. ಮೂರನೆಯ ಘಟನೆಯಲ್ಲಿ, ಕಥುವಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು; ಅಲ್ಲದೇ ಈ ಬಾರಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಇಬ್ಬರು ಯೋಧರು ಹುತಾತ್ಮರಾದರು. ಇಲ್ಲಿ ಜೂನ್ 11 ರ ರಾತ್ರಿಯಿಂದ ಘರ್ಷಣೆ ನಡೆದಿತ್ತು. ಹತರಾದ ಉಗ್ರರಿಂದ 30 ಬುಲೆಟ್‌ಗಳನ್ನು ಒಳಗೊಂಡ 3 ಮ್ಯಾಗಜಿನ್‌ಗಳು, 24 ಬುಲೆಟ್‌ಗಳನ್ನು ಒಳಗೊಂಡ 1 ಮ್ಯಾಗಜೀನ್, 75 ಜೀವಂತ ಕಾಟ್ರಿಡ್ಜ್‌ಗಳು, 3 ಗ್ರೆನೇಡ್‌ಗಳು, 1 ಲಕ್ಷ ರೂಪಾಯಿ, ಆಹಾರ ಪದಾರ್ಥಗಳು, ಔಷಧಗಳು, ಪಾಕಿಸ್ತಾನಿ ನಿರ್ಮಿತ ಚುಚ್ಚುಮದ್ದು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಜಮ್ಮು-ಕಾಶ್ಮೀರ ಇಂದಿಗೂ ಭಯೋತ್ಪಾದನೆಯಿಂದ ಕೂಡಿರುವುದು ಇಲ್ಲಿಯವರೆಗಿನ ಎಲ್ಲ ರಾಜಕೀಯ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ! ಈ ಪರಿಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯವೆಂದು ತಿಳಿಸುತ್ತದೆ.