Stock Market Crash : ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತದೆ! – ಅಮೇರಿಕನ್ ಅರ್ಥಶಾಸ್ತ್ರಜ್ಞ

ಷೇರು ಮಾರುಕಟ್ಟೆಯ ಉಬ್ಬುವಿಕೆ ಶೀಘ್ರದಲ್ಲೇ ಸ್ಫೋಟಗೊಳ್ಳುವುದೆಂದು ಅಂದಾಜಿಸಲಾಗಿದೆ

ಅಮೇರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹ್ಯಾರಿ ಡೆಂಟ್

ವಾಷಿಂಗ್ಟನ್ – ಭವಿಷ್ಯದಲ್ಲಿ ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದ್ದು 2008 ರ ಆರ್ಥಿಕ ಹಿಂಜರಿತದ ಕುಸಿತಕ್ಕಿಂತ ಹೆಚ್ಚಿರುವುದು ಎಂದು ಅಮೇರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹ್ಯಾರಿ ಡೆಂಟ್ ನುಡಿದಿದ್ದಾರೆ. ‘ಫಾಕ್ಸ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ, ಇದು ಚಂಡಮಾರುತದ ಮೊದಲಿನ ಶಾಂತತೆಯಾಗಿದೆ; ಏಕೆಂದರೆ ಷೇರು ಮಾರುಕಟ್ಟೆಯು ಮೇ ತಿಂಗಳನ್ನು ಲಾಭದೊಂದಿಗೆ ಮುಗಿಸಿದೆ. ಷೇರು ಮಾರುಕಟ್ಟೆಯ ಉಬ್ಬುವಿಕೆ ಇನ್ನೂ ಒಡೆದಿಲ್ಲ ಮತ್ತು ಅದು ಒಡೆದಾಗ ಸಂಪೂರ್ಣವಾಗಿ ಕುಸಿಯುವುದು ಎಂದಿದ್ದಾರೆ.

ಡೆಂಟ್ ಅವರು ‘ಎಚ್.ಎಸ್. ಡೆಂಟ್ ಇನ್ಟೆಸ್ಟ್ಮೆಂಟ್ ಮ್ಯಾನೇಜ್ಮೆಂಟ್’ ನ ಸಂಸ್ಥಾಪಕರಾಗಿದ್ದು ಅಮೇರಿಕಾದ ಆರ್ಥಿಕತೆಯ ಬಗ್ಗೆ ಅನೇಕ ಬಾರಿ ಬಹಿರಂಗವಾಗಿ ಅಭಿಪ್ರಾಯ ಮಂಡಿಸಿದ್ದಾರೆ. ‘ನಿವಿಡಿಯಾ’ದಂತಹ ಉನ್ನತ-ಕಾರ್ಯನಿರ್ವಹಣೆಯ ಷೇರುಗಳಲ್ಲಿನ ಲಾಭಗಳ ಕುರಿತು ಮಾತನಾಡುವಾಗ ಡೆಂಟ್ ಮಾತನಾಡಿ, ಪರಿಸ್ಥಿತಿಯು ಹೆಚ್ಚು ಕಾಲ ಹೀಗೆಯೇ ಇರುವುದಿಲ್ಲ. ಮುಂದೊಂದು ಕಾಲದಲ್ಲಿ ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಕುಸಿಯಬಹುದು ಎಂದು ಎಚ್ಚರಿಸಿದ್ದಾರೆ.