ಭಾರತದಲ್ಲಿ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೈನರ್ ಹೇಳಿಕೆ !
ನವದೆಹಲಿ – ಯೋಗವು ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಭಾರತದಲ್ಲಿನ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೈನರ್ ಹೇಳಿದ್ದಾರೆ. ‘ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಪ್ರಧಾನಿಯವರ ಈ ‘ಪೋಸ್ಟ್’ಗೆ ಪ್ರತಿಕ್ರಿಯಿಸಿದ ರಾಯಭಾರಿ ಸ್ಟೈನರ್, ‘ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂಪೂರ್ಣವಾಗಿ ಒಪ್ಪುತ್ತೇನೆ’ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಅನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಪ್ರಸ್ತಾಪಿಸಿದ್ದರು. ನಂತರ ಡಿಸೆಂಬರ್ 11, 2014 ರಂದು, 130 ದೇಶಗಳು ಈ ಪ್ರಸ್ತಾಪವನ್ನು ಅನುಮೋದಿಸಿದವು.
Yoga is India’s greatest gift to the world!
Statement by May Elin Steiner, Ambassador of Norway to India!#yogainspiration #yogacommunity pic.twitter.com/Sm9Nx53u6S
— Sanatan Prabhat (@SanatanPrabhat) June 12, 2024