Gandhi Statue Wrecked In Italy : ಇಟಲಿಯಲ್ಲಿ ಖಲಿಸ್ತಾನಿಗಳಿಂದ ಮ. ಗಾಂಧಿ ಪ್ರತಿಮೆ ಧ್ವಂಸ !

ಪ್ರಧಾನಿ ಮೋದಿ ಇಟಲಿ ಭೇಟಿಗೂ ಮುನ್ನ ನಡೆದ ಘಟನೆ

ರೋಮ್ (ಇಟಲಿ) – ಪ್ರಧಾನಿ ನರೇಂದ್ರ ಮೋದಿ ಜೂನ್ 13 ರಂದು ಇಟಲಿಗೆ ಭೇಟಿ ನೀಡಲಿದ್ದು, ‘ಜಿ7’ (ಯುಎಸ್, ಕೆನಡಾ, ಯುಕೆ, ಫ್ರಾನ್ಸ್, ಜರ್ಮನಿ, ಭಾರತ ಮತ್ತು ಜಪಾನ್) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದಕ್ಕು ಮುಂನ್ನವೇ ಇಟಲಿಯಲ್ಲಿ ಖಲಿಸ್ತಾನ್ ಬೆಂಬಲಿಗರು ಮೋಹನದಾಸ್ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಪ್ರತಿಮೆಯ ಜಾಗದಲ್ಲಿ ಖಲಿಸ್ತಾನ್ ಬೆಂಬಲಿಗರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಉಲ್ಲೇಖಿಸಿ ಬರಹ ಬರೆದಿದ್ದಾರೆ. ಈ ಘಟನೆಯ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿಯು, ಮ. ಗಾಂಧಿ ಪ್ರತಿಮೆಗೆ ಹಾನಿ ಮಾಡಿದ ಅಂಶವನ್ನು ಭಾರತವು ಇಟಲಿಗೆ ತಿಳಿಸಿದೆ ಮತ್ತು ಪ್ರತಿಮೆಯನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳಿದೆ.

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ, ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾಗವಹಿಸಲಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತವು ಇಟಲಿಯ ಮೇಲೆ ಒತ್ತಡ ಹೇರಬೇಕು, ಇಲ್ಲದಿದ್ದರೆ ಅವರು ಇನ್ನಷ್ಟು ಅಪರಾಧ ಕೃತ್ಯಗಳನ್ನು ಎಸಗಲು ಧೈರ್ಯ ಮಾಡುತ್ತಾರೆ !