Kumbha Mela 2025 : ಪ್ರಯಾಗರಾಜ ಕುಂಭಮೇಳಕ್ಕಾಗಿ 4 ಸಾವಿರ ಹೆಕ್ಟೇರ್ ಭೂಮಿಯ ಬಳಕೆ !

ಮಹಾ ಕುಂಭಕ್ಕಾಗಿ 2 ಸಾವಿರ 500 ಕೋಟಿ ರೂಪಾಯಿಗಳ ಅನುದಾನ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ಪ್ರಯಾಗರಾಜನಲ್ಲಿ ನಡೆಯಲಿರುವ ಮಹಾಕುಂಭದ ಸಿದ್ಧತೆಯ ದೃಷ್ಟಿಯಿಂದ, 2019 ರಲ್ಲಿ 3 ಸಾವಿರದ 200 ಹೆಕ್ಟೇರ್‌ಗಳಿಗೆ ಹೋಲಿಸಿದರೆ 2025 ರಲ್ಲಿ ಈ ಕ್ಷೇತ್ರವನ್ನು 4 ಸಾವಿರ ಹೆಕ್ಟೇರ್‌ಗೆ ಹೆಚ್ಚಿಸಲು ನಿರ್ಧರಿಸಿದೆ. ಮೌನಿ ಅಮವಾಸ್ಯೆಯಂದು ಸುಮಾರು 6 ಕೋಟಿ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಕುಂಭಮೇಳಕ್ಕೆ 2 ಸಾವಿರ 500 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ. ಮೌನಿ ಅಮವಾಸ್ಯೆಯು ಮುಂದಿನ ವರ್ಷ ಅಂದರೆ 2025 ರಲ್ಲಿ ಜನವರಿ 29 ರಂದು ಬರಲಿದೆ.

ಸರಕಾರದ ಇತರ ಕೆಲವು ಪ್ರಮುಖ ನಿರ್ಣಯಗಳು : ಸರಕಾರವು ಮುರಾದಾಬಾದ ವಿದ್ಯಾಪೀಠಕ್ಕೆ ‘ಗುರು ಜಾಂಭೇಶ್ವರ ವಿದ್ಯಾಪೀಠ’ ಎಂದು ನಾಮಕರಣ ಮಾಡಲು ಅನುಮತಿ ನೀಡಿದೆ. ಅಲ್ಲದೆ, ನೋಯ್ಡಾದಲ್ಲಿ 500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಈ ಆಸ್ಪತ್ರೆ 15 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.