Lobby To Get Khalistani Amritpal Out Of Jail: ಜೈಲಲ್ಲಿದ್ದೇ ಸಂಸದಿಯ ಚುನಾವಣೆಯಲ್ಲಿ ಗೆದ್ದ ಅಮೃತಪಾಲ್ !

ಭಾರತದ ಜೈಲಿನಲ್ಲಿರುವ ಖಲಿಸ್ತಾನ ಬೆಂಬಲಿಗ ಅಮೃತಪಾಲ್ ಇವನ ಬಿಡುಗಡೆಗಾಗಿ ಅಮೆರಿಕದಲ್ಲಿ ಅಭಿಯಾನ !

ವಾಷಿಂಗ್ಟನ್ (ಅಮೇರಿಕಾ) – ಪಂಜಾಬದಲ್ಲಿನ ಸ್ವತಂತ್ರ ಸಂಸದ ಮತ್ತು ಜೈಲಲ್ಲಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹನನ್ನು ಬಿಡುಗಡೆ ಮಾಡುವಂತೆ ಅಮೆರಿಕದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ ಅಮೇರಿಕಾದಲ್ಲಿನ ನ್ಯಾಯವಾದಿ ಸರದಾರ ಜಸಪ್ರೀತ ಸಿಂಹ ಇವರು ನೇತೃತ್ವ ವಹಿಸಿದ್ದು ಅವರು ಅಮೆರಿಕಾದ ಉಪರಾಷ್ಟ್ರಪತಿ ಕಮಲ ಹ್ಯಾರಿಸ್ ಇವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಅಮೃತಪಾಲನ ಬಿಡುಗಡೆಗಾಗಿ ಅಮೆರಿಕ ಹಸ್ತಕ್ಷೇಪ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನ್ಯಾಯವಾದಿ ಜಸಪ್ರೀತ ಸಿಂಹ ಇವರು ಮಾತು ಮುಂದುವರೆಸಿ, ”ಅಮೇರಿಕಾದಲ್ಲಿನ ಎಲ್ಲಾ ಗುರುದ್ವಾರದ ಪ್ರತಿನಿಧಿಗಳು ಮತ್ತು ಅಮೆರಿಕಾದಲ್ಲಿನ ಸಿಖ್ ಜನಾಂಗದ ಜನರು ಅಮೃತಪಾಲರ ಬಿಡುಗಡೆಯ ಅಂಶ  ಅಮೇರಿಕಾ ಸರಕಾರದ ಎದುರು ಮಂಡಿಸಲು ನನಗೆ ಹೇಳಿದರು. ಅಮೇರಿಕಾ ಸರಕಾರ ಈ ಪ್ರಕರಣದಲ್ಲಿ ಖಂಡಿತವಾಗಿಯೂ ಹಸ್ತಕ್ಷೇಪ ಮಾಡುವುದು.” ಎಂದು ಹೇಳಿದ್ದಾರೆ. ನ್ಯಾಯವಾದಿ ಜಸಪ್ರೀತ ಸಿಂಹ ಇವರು ಇದೆ ಅಂಶದ ಬಗ್ಗೆ ಜೂನ್ ೭ ರಂದು ಕೋರಿ ಬ್ರೋಕರ್ ಇವರನ್ನು ನ್ಯೂಜರ್ಸಿಯಲ್ಲಿ ಭೇಟಿ ಮಾಡಿದ್ದರು.

ಸಂಪಾದಕೀಯ ನಿಲುವು

ಇಂತಹ ಭಾರತ ವಿರೋಧಿ ಅಭಿಯಾನಕ್ಕೆ ಅಮೆರಿಕ ವಿರೋಧಿಸುವುದಿಲ್ಲ, ಬದಲಾಗಿ ಸೊಪ್ಪು ಹಾಕುತ್ತದೆ, ಇದನ್ನು ತಿಳಿದುಕೊಳ್ಳಿ !