Indonesian Comedian In Jail: ಪ್ರವಾದಿ ಮಹಮ್ಮದ ಪೈಗಂಬರ ಅವರನ್ನು ಅಪಮಾನ ಮಾಡಿದ ಪ್ರಕರಣದಲ್ಲಿ ಇಂಡೋನೇಷಿಯಾದ ಹಾಸ್ಯ ಕಲಾವಿದನಿಗೆ 7 ತಿಂಗಳ ಜೈಲು ಶಿಕ್ಷೆ

ಜಕಾರ್ತ (ಇಂಡೋನೇಷ್ಯಾ) – ಮಹಮ್ಮದ ಪೈಗಂಬರರನ್ನು ಅವಮಾನಿಸಿದ ಆರೋಪದಲ್ಲಿ ಇಂಡೋನೇಷ್ಯಾದ ಓಲಿಯಾ ರೆಹಮಾನ ಹೆಸರಿನ ಹಾಸ್ಯಕಲಾವಿದನಿಗೆ 7 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

1. ಲ್ಯಾಂಪುಂಗ್ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರ ರಿಕಿ ರಾಮಧನ ಇವರು ಮಾತನಾಡಿ, ಔಲಿಯಾ ರೆಹಮಾನನು ಡಿಸೆಂಬರ್‌ನಲ್ಲಿ ಸುಮಾತ್ರಾ ದ್ವೀಪದಲ್ಲಿ ಏಕಪಾತ್ರಾಭಿನಯದ ಹಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಓಲಿಯಾ ಒಂದು ಹಾಸ್ಯವನ್ನು ಮಾಡಿ, `ಇಂದು ಇಂಡೋನೇಷ್ಯಾದ ಮಹಮ್ಮದ ಹೆಸರಿನ ಅನೇಕ ಜನರು ಕೆಟ್ಟದಾಗಿ ವರ್ತಿಸುತ್ತಿರುವುದು ಕಾಣಿಸುತ್ತಿದೆ’, ಎಂದು ಹೇಳಿದರು, ಈ ಹೇಳಿಕೆಯಿಂದ ಓಲಿಯಾರನ್ನು ತಪ್ಪಿತಸ್ಥರೆಂದು ನಿರ್ಧರಿಸಲಾಯಿತು.

2. 2017 ರಲ್ಲಿ, ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಾಜಿ ಗವರ್ನರ್, ಬಸುಕಿ ತಜಾಹಾಜಾ ಪೂರ್ಣಮಾ ಅಲಿಯಾಸ್ ಅಹೋಕ ಇವರಿಗೆ ಮಹಮ್ಮದ ಪೈಗಂಬರ ಅವರನ್ನು ಅವಮಾನಿಸಿದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ದೇಶದ ಮಾನವ ಹಕ್ಕುಗಳ ಸಂಘಟನೆಗಳು ಈ ಸಂದರ್ಭದಲ್ಲಿ  ಕಾನೂನುಗಳ ವಿರುದ್ಧ ನಿರಂತರವಾಗಿ ಅಭಿಯಾನ ನಡೆಸುತ್ತಿವೆ. ‘ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶಗಳಲ್ಲಿ, ಮಹಮ್ಮದ ಪೈಗಂಬರರನ್ನು ಅವಮಾನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ; ಆದರೆ ಭಾರತದಲ್ಲಿ ಮಾತ್ರ, ಹಿಂದೂ ದೇವತೆಗಳನ್ನು ಅವಮಾನಿಸುವವರ ವಿರುದ್ಧ ದೂರನ್ನೂ ದಾಖಲಿಸುವುದಿಲ್ಲ !