ಜಮ್ಮು-ಕಾಶ್ಮೀರದಲ್ಲಿ 80ಕ್ಕೂ ಹೆಚ್ಚು ಭಯೋತ್ಪಾದಕರ ಪ್ರವೇಶ !

ಪೊಲೀಸ್ ಮಹಾನಿರ್ದೇಶಕರ ಮಾಹಿತಿ!

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದ ಯುವಕರು ಭಯೋತ್ಪಾದಕರಾಗುವ ಪ್ರಮಾಣ ತೀವ್ರವಾಗಿ ತಗ್ಗಿದ್ದರೂ ಸಹ ವಿದೇಶಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ. ”ರಾಜ್ಯದಲ್ಲಿ 70 ರಿಂದ 80 ವಿದೇಶಿ ಭಯೋತ್ಪಾದಕರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಪ್ರವೇಶಿಸಿದ್ದಾರೆ. ಅವರು ಇಲ್ಲಿನ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ವಿದ್ಯುತ್ ಪೂರೈಸುವ ವಿದ್ಯುತ್ ಟವರ್‌ಗಳನ್ನು ಸ್ಫೋಟಿಸಲು ಅವರು ಯತ್ನಿಸಿದ್ದರು” ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಆರ್. ಸ್ವೆನ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಶಾಂತಿಗಾಗಿ ಪೊಲೀಸರು ಕೆಲವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಸ್ವೈನ್ ಹೇಳಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರ ನೇಮಕಾತಿ ನಿಯಂತ್ರಣಕ್ಕೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಭಯೋತ್ಪಾದನೆಯು ಸ್ಥಳೀಯ ಭಯೋತ್ಪಾದನೆಯಿಂದ ವಿದೇಶಿ ಭಯೋತ್ಪಾದನೆಯತ್ತ ಸಾಗುತ್ತಿದೆ. ಯುವಕರನ್ನು ಬಂದೂಕುಗಳಿಂದ ದೂರವಿಡುವ ನಮ್ಮ ಪ್ರಯತ್ನ ಯಶಸ್ವಿಯಾಗಿದೆ. ಇದರಿಂದ ಅನೇಕ ಮಹಿಳೆಯರು ವಿಧವೆಯಾಗುವುದರಿಂದ, ಅನೇಕ ಕುಟುಂಬಗಳು ವಿನಾಶದಿಂದ ಮತ್ತು ಅನೇಕ ಜೀವಗಳನ್ನು ವಿನಾಶದಿಂದ ರಕ್ಷಿಸಲಾಗಿದೆ. ಪೊಲೀಸರು ಪರಿಸ್ಥಿತಿಯ ಸಂಪೂರ್ಣ ಅರಿವನ್ನು ಹೊಂದಿದ್ದು, ಲೋಕಸಭೆ ಚುನಾವಣೆಗೆ ಸಾಕ್ಷಿಯಾಗಿರುವಂತೆ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಜಮ್ಮು ಮತ್ತು ಕಾಶ್ಮೀರ ಶಾಂತಿಯುತ ಮತ್ತು ಭಯಮುಕ್ತ ವಾತಾವರಣವನ್ನು ಕಾಪಾಡುವುದು. ಇದು ಲೋಕಸಭೆ ಚುನಾವಣೆಯಲ್ಲಿ ಕಂಡು ಬಂದಿದೆ ಎಂದರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಪ್ರತಿ ವರ್ಷ 100 ರಿಂದ 200 ಭಯೋತ್ಪಾದಕರನ್ನು ಸದೆಬಡಿಯಲಾಗುತ್ತದೆ, ಆದರೂ ಸಹ ಪಾಕಿಸ್ತಾನದಿಂದ ಹೊಸ ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳುತ್ತಾರೆ. ಈ ನುಸುಳುವಿಕೆಯನ್ನು ತಡೆಯುವಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ವಿಫಲವಾಗುತ್ತಿವೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !

ಪಾಕಿಸ್ತಾನದ ಭಯೋತ್ಪಾದಕ ನಿರ್ಮಾಣ ಕಾರ್ಖಾನೆಗಳನ್ನು ಮುಚ್ಚದ ಹೊರತು, ಈ ಪರಿಸ್ಥಿತಿ ಇನ್ನೂ ಹಲವು ವರ್ಷಗಳವರೆಗೆ ಮುಂದುವರಿಯುತ್ತಲೇ ಇರುವುದು!