Congress Bhupesh Bhagel : 6 ತಿಂಗಳು ಅಥವಾ 1 ವರ್ಷದೊಳಗೆ ಮಧ್ಯಂತರ ಚುನಾವಣೆಗಳು ನಡೆಯಲಿದೆ ! – ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್

ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಇವರ ಹೇಳಿಕೆ !

ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್

ನವದೆಹಲಿ – ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಿರಬೇಕು. 6 ತಿಂಗಳೊಳಗೆ ಅಥವಾ ವರ್ಷದೊಳಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಖುರ್ಚಿ ಅಲುಗಾಡುತ್ತಿದೆ. ರಾಜಸ್ಥಾನದ ಭಾಜಪ ಸರಕಾರದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಖುರ್ಚಿ ಅಲುಗಾಡುತ್ತಿದೆ, ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಇವರು `ಎಕ್ಸ’ ಮೇಲಿನ ಪೋಸ್ಟನಲ್ಲಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿಯವರ ಸರಕಾರ ಸ್ಥಾಪನೆಯಾಗುವ ಮೊದಲೇ ಅದು ಬೀಳುವ ಕನಸು ಕಾಣಲಾರಂಭಿಸಿದೆ ಅದರಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರರ್ಥ ಭಾರತ ರಾಜಕೀಯ ದೃಷ್ಟಿಯಿಂದ ಅಸ್ಥಿರವಾಗಿರಬೇಕು ಎನ್ನುವುದೇ ಕಾಂಗ್ರೆಸ್ಸಿಗರ ಆಶಯವಾಗಿದೆಯೆಂದು ಗಮನಿಸಬೇಕು.