(ಕಾರಿಡಾರ್ ಎಂದರೆ ಸುಸಜ್ಜಿತ ಮಾರ್ಗ)
ದುಬೈ – ನಾವು ಒಂದು ‘ಧಾರ್ಮಿಕ ಕಾರಿಡಾರ್’ ಅನ್ನು ಸಿದ್ಧಪಡಿಸಬಹುದು ಒಟ್ಟಾರೆ` ಭಾರತದಲ್ಲಿರುವ ಹಿಂದೂ ಮತ್ತು ಜೈನ ಸಮುದಾಯದ ಜನರು ನಮ್ಮ ಪ್ರಾಂತ್ಯಕ್ಕೆ (ಸಿಂಧ್) ಬಂದು ಆ ಸ್ಥಳದಲ್ಲಿ ಪೂಜೆ- ಅರ್ಚನೆ ಮಾಡಬಹುದು ಎಂದು ಸಿಂಧ್ ಪ್ರವಾಸೋದ್ಯಮ ಸಚಿವ ಜುಲ್ಫಿಕರ್ ಅಲಿ ಶಾ ಅವರು ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.
ಅವರು ತಮ್ಮ ಮಾತನ್ನು ಮುಂದುವರಿಸಿ, ಉಮರಕೋಟ ಮತ್ತು ನಗರಪಾರಕರ ನಡುವೆ ಕಾರಿಡಾರ್ ನಿರ್ಮಿಸಲಾಗುವುದು. ಉಮರಕೋಟನಲ್ಲಿ ಭಗವಾನ ಶಿವನ ದೇವಾಲಯವಿದೆ. ಈ ದೇವಸ್ಥಾನ 2 ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ನಗರಪಾರಕರನಲ್ಲಿಯೂ ಅನೇಕ ಜೈನ ದೇವಾಲಯಗಳಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸುತ್ತಾರೆ. ಪಾಕಿಸ್ತಾನದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯ ಹಿಂದೂಗಳು ಮತ್ತು ಜೈನರು ಭಾರತಕ್ಕೆ ಬರುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಅಧಿಕೃತ ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಪರಮಹಂಸಜೀ ಮಹಾರಾಜ್ ಸಮಾಧಿ (ಖೈಬರ್-ಪಖ್ತುಂಖ್ವಾ), ಬಲೂಚಿಸ್ತಾನದ ಹಿಂಗಲಾಜ್ ಮಾತಾ ಮಂದಿರ, ಪಂಜಾಬ್‌ನ ಚಕವಾಲ ಜಿಲ್ಲೆಯ ಕಟಾಸ್ ರಾಜ್ ಸಂಕೀರ್ಣ ಮತ್ತು ಪಂಜಾಬ್‌ನ ಮುಲ್ತಾನ್ ಜಿಲ್ಲೆಯ ಪ್ರಲ್ಹಾದ ಭಗತ ದೇವಸ್ಥಾನಗಳು ಪಾಕಿಸ್ತಾನದ ಕೆಲವು ಪ್ರಮುಖ ಹಿಂದೂ ದೇವಸ್ಥಾನಗಳಾಗಿವೆ.