Nepal Calls Back Its Ambassadors : ಭಾರತ, ಅಮೆರಿಕ ಸೇರಿದಂತೆ 11 ದೇಶಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ನೇಪಾಳ ಸರ್ಕಾರ !

ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ

ಕಾಠ್ಮಂಡು – ನೇಪಾಳ ಸರ್ಕಾರ 11 ದೇಶಗಳ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಭಾರತ ಮತ್ತು ಅಮೇರಿಕಾದಲ್ಲಿ ನೇಮಕಗೊಂಡ ರಾಯಭಾರಿಗಳೂ ಸೇರಿದ್ದಾರೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಇವರು ನೇಪಾಳಿ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಮುರಿದುಕೊಂಡು ಕೆ.ಪಿ. ಶರ್ಮಾ ಒಲಿ ಜತೆ ಕೈಜೋಡಿಸಿದನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

1. ನೇಪಾಳ ಪ್ರಧಾನಿ ಪ್ರಚಂಡ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಭಾರತ ಪ್ರವಾಸಕ್ಕೂ ಮುನ್ನ ನೇಪಾಳ ಸರ್ಕಾರ ಈ ಕ್ರಮ ಕೈಗೊಂಡಿದೆ.

2. ನೇಪಾಳದ ವಿದೇಶಾಂಗ ಸಚಿವೆ ಶ್ರೇಷ್ಠ ಅವರು ನೇಪಾಳಿ ಕಾಂಗ್ರೆಸ್‌ನ ಕೋಟಾದಿಂದ ನೇಮಕಗೊಂಡ ರಾಯಭಾರಿಗಳನ್ನು ಹಿಂಪಡೆಯುವ ಪ್ರಸ್ತಾಪವನ್ನು ವಿರೋಧಿಸಿದ್ದರು; ಆದರೆ ಪ್ರಧಾನಿ ಪ್ರಚಂಡ ಮತ್ತು ‘ಸಿ.ಪಿ.ಎನ್-ಯು.ಎಂ.ಎಲ್.’ ಅಧ್ಯಕ್ಷ ಓಲಿ ಇವರು ರಾಯಭಾರಿಗಳನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ, ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.