ಪಾಕಿಸ್ತಾನವು ಭಯೋತ್ಪಾದಕ ರಶೀದ್ ಮತ್ತು ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಅಂಶವನ್ನು ಮಂಡಿಸಿತ್ತು !
ವಾಷಿಂಗ್ಟನ್ – ಭಾರತದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗನು ಪಂಜಾಬ್‌ನ ಖದೂರ್ ಸಾಹಿಬ್ ಚುನಾವಣಾ ಕ್ಷೇತ್ರದಿಂದ ಗೆದ್ದಿದ್ದರೆ, ಭಯೋತ್ಪಾದಕ ಶೇಖ್ ಅಬ್ದುಲ್ ರಶೀದ್ (ಇಂಜಿನಿಯರ್ ರಶೀದ್) ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಗೆದ್ದಿದ್ದಾನೆ. ಇವರಿಬ್ಬರೂ ಭಯೋತ್ಪಾದನೆ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಅವರ ಗೆಲುವಿಗೆ ಪಾಕಿಸ್ತಾನ ವಿಶೇಷ ಆಸಕ್ತಿ ವಹಿಸಿದೆ.
ಅಮೇರಿಕಾದ ವಿದೇಶಾಂಗ ವಕ್ತಾರರಿಗೆ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು, ‘ಭಾರತದ ಚುನಾವಣೆಯ ನಕಾರಾತ್ಮಕ ಭಾಗವನ್ನು ಬಹುಶಃ ಅಮೇರಿಕಾ ನಿರ್ಲಕ್ಷಿಸಿದೆ. ಈ ಚುನಾವಣೆಯಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್ ಮತ್ತು ಕಾಶ್ಮೀರದಿಂದ ಆಯ್ಕೆಯಾದ ಅಬ್ದುಲ್ ಯಾಶಿಯಾ ಅವರ ಗೆಲುವನ್ನು ನೀವು ಹೇಗೆ ನೋಡುತ್ತೀರಿ?’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಖಂಡತುಂಡವಾಗಿ ಉತ್ತರಿಸಿದರು. ಅವರು, ‘ಭಾರತದಲ್ಲಿನ ಆಂತರಿಕ ಚುನಾವಣೆಗಳು ಅಥವಾ ರಾಜಕೀಯ ಮೂಲಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು, ಪಾಕಿಸ್ತಾನಿ ಪತ್ರಕರ್ತರು ಕಾಶ್ಮೀರದ ಚುನಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದ. ಅದಕ್ಕೂ ಅಮೆರಿಕ ಪ್ರತಿಕ್ರಿಯಿಸಲಿಲ್ಲ.
ಸಂಪಾದಕೀಯ ನಿಲುವುಪಾಕಿಸ್ತಾನದ ಆರ್ಥಿಕವು ಮೂರಾಬಟ್ಟೆಯಾಗಿದೆ. ಆದರೂ ಅಲ್ಲಿನ ರಾಜಕಾರಣಿಗಳು, ಸಾರ್ವಜನಿಕರು ಮತ್ತು ಪತ್ರಕರ್ತರು ತಮ್ಮ ದೇಶದ ಸಮಸ್ಯೆಗಳನ್ನು ಗಂಭೀರವಾಗಿ ನೋಡುವ ಬದಲು ಭಾರತದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಕಂಡುಬರುತ್ತದೆ. ಇಂತಹ ದೇಶಕ್ಕೆ ಕರುಣೆಯಿಲ್ಲದೆ ಹುಟ್ಟಡಗಿಸುವುದು ಅವಶ್ಯಕ ! |