ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ವರ್ಷ ಮಹಿಳಾ ಸಂಸದರ ಸಂಖ್ಯೆ 4ಕ್ಕೆ ಇಳಿಕೆ !

ನವ ದೆಹಲಿ – ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 74 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಂದರೆ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರು. ಇದರಿಂದಾಗಿ ಈ ಸಮಯದಲ್ಲಿ 4 ಮಹಿಳಾ ಸಂಸದರು ಕಡಿಮೆಯಾಗಿದ್ದಾರೆ. ಒಟ್ಟು 543 ಸದಸ್ಯರ ಸಂಖ್ಯೆಯಿರುವ ಲೋಕಸಭೆಯಲ್ಲಿ ಆಯ್ಕೆಯಾದ ಮಹಿಳೆಯರ ಸಂಖ್ಯೆ 74 ಅಂದರೆ ಶೇ.13.63 ಗಳಷ್ಟಿತ್ತು. ಮತಕ್ಷೇತ್ರಗಳ ಪುನರ್ ರಚನೆಯ ನಂತರ ಶೇ.33ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಈಗಿನ ಮಹಿಳಾ ಸದಸ್ಯರ ಸಂಖ್ಯೆ ಖಂಡಿತವಾಗಿಯೂ ತುಂಬಾ ಕಡಿಮೆಯಾಗಿದೆ. ಅದರಲ್ಲೂ ವಿಶೇಷವೆಂದರೆ, 1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಕೇವಲ 22 ಮಹಿಳಾ ಸಂಸದರು ಆಯ್ಕೆಯಾಗಿದ್ದರು.

1. ಈಗಿನ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ 74 ಮಹಿಳಾ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. ಅವುಗಳಲ್ಲಿ ಭಾಜಪದ 31, ಕಾಂಗ್ರೆಸ್ ನ 13, ತೃಣಮೂಲ ಕಾಂಗ್ರೆಸ್ ನ 11, ಸಮಾಜವಾದಿ ಪಕ್ಷದ 5, ದ್ರಾವಿಡ ಮುನ್ನೇತ್ರ ಕಳಘಂನ 3, ಲೋಕ ಜನಶಕ್ತಿ ಪಕ್ಷದ 2 ಮತ್ತು ಸಂಯುಕ್ತ ಜನತಾ ದಳದ 2 ಹೀಗೆ ಸಂಖ್ಯೆಯಿದೆ. ಹಾಗೆಯೇ 7 ಪಕ್ಷಗಳಿಂದ ತಲಾ ಒಬ್ಬ ಮಹಿಳಾ ಸಂಸದರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಒಟ್ಟು ಚುನಾಯಿತ ಸದಸ್ಯರ ಪೈಕಿ ಮಹಿಳಾ ಸಂಸದರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ತೃಣಮೂಲ ಕಾಂಗ್ರೆಸ್ ನ ಶೇ.37.93, ಕಾಂಗ್ರೆಸ್ ನ ಶೇ.13.13 ಮತ್ತು ಭಾಜಪ ಶೇ.12.92 ಚುನಾಯಿತರಾಗಿದ್ದಾರೆ.

2. ಚುನಾಯಿತ 74 ಮಹಿಳಾ ಸಂಸದರ ಪೈಕಿ 43 ಸದಸ್ಯರು ಮೊದಲ ಬಾರಿಗೆ ಸಂಸತ್ತಿಗೆ ಹೋಗಲಿದ್ದಾರೆ. ಸಂಸತ್ತಿನ ಸದಸ್ಯರ ಸರಾಸರಿ ವಯಸ್ಸು ತೆಗೆದಾಗ 56 ವರ್ಷಗಳಾಗಿವೆ. ಒಟ್ಟು ಮಹಿಳಾ ಸದಸ್ಯರ ಸರಾಸರಿ ವಯಸ್ಸು 50 ವರ್ಷಗಳು. ಒಟ್ಟು ಮಹಿಳಾ ಸದಸ್ಯರಲ್ಲಿ ಶೇ. 78 ರಷ್ಟು ಮಂದಿ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ.

ಮಹಿಳಾ ಅಭ್ಯರ್ಥಿಗಳ ಪ್ರಮಾಣ

2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 8 ಸಾವಿರ 360 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಶೇ 10ರಷ್ಟು ಮಾತ್ರ ಮಹಿಳಾ ಅಭ್ಯರ್ಥಿಗಳಿದ್ದರು. 1957ರ ಎರಡನೇ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ. 3 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾದರು. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಶೇ.10ರ ಗಡಿ ದಾಟಿದೆ. ದೇಶಾದ್ಯಂತ ಒಟ್ಟು ಭಾಜಪ ಅಭ್ಯರ್ಥಿಗಳ ಪೈಕಿ ಶೇ.16ರಷ್ಟು ಮಹಿಳಾ ಅಭ್ಯರ್ಥಿಗಳಿದ್ದರು. ಅದೇ ನಿಷ್ಕರ್ಷದಲ್ಲಿ ಶೇ. 13 ರಷ್ಟು ಕಾಂಗ್ರೆಸ ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.