ಅಮೃತಸರ: ಸುವರ್ಣ ಮಂದಿರದಲ್ಲಿ ಖಲಿಸ್ತಾನ ಬೆಂಬಲಿಸುವ ಘೋಷಣೆ

ಅಮೃತಸರ (ಪಂಜಾಬ್) – 6 ಜೂನ್ 1984 ರಂದು ಸುವರ್ಣ ಮಂದಿರದಲ್ಲಿ ಭಾರತೀಯ ಸೇನೆಯು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಬ್ಲೂ ಸ್ಟಾರ್’ ಎಂಬ ಕಾರ್ಯಾಚರಣೆಯನ್ನು ನಡೆಸಿತ್ತು. ಈ ದಿನದ ನಿಮಿತ್ತವಾಗಿ ಖಲಿಸ್ತಾನಿ ಬೆಂಬಲಿಗರು ಸುವರ್ಣ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಗೂಡಿದರು.

ಕೈಯಲ್ಲಿ ಖಡ್ಗ ಹಿಡಿದು ‘ಖಲಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು, ಅಲ್ಲದೇ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವನ ಛಾಯಾಚಿತ್ರವನ್ನು ಹಿಡಿದಿದ್ದರು. ಈ ಸಂದರ್ಭದಲ್ಲಿ ಬಂಧನಕ್ಕೊಳಗಾದ ಮತ್ತು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಅಮೃತಪಾಲ್ ಸಿಂಗ್ ಅವರ ತಾಯಿ ಉಪಸ್ಥಿತರಿದ್ದರು. ಅಲ್ಲದೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಮಾಡಿದ್ದ ಅವರ ಅಂಗರಕ್ಷಕರಲ್ಲಿ ಒಬ್ಬರಾದ ಬಿಯಾಂತ್ ಸಿಂಗ್ ಅವರ ಪುತ್ರ ಸರಬ್ಜಿತ್ ಸಿಂಗ್ ಖಾಲ್ಸಾ ಚುನಾವಣೆಯಲ್ಲಿ ಫರೀದಕೋಟದಿಂದ ಗೆದ್ದಿದ್ದು, ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಮೃತಪಾಲ್ ನನ್ನು ದೇಶದ್ರೋಹದ ಆರೋಪದ ಮೇಲೆ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿಡಲಾಗಿದೆ.