Muslim Factor Loksabha Elections : ದೇಶದ 90 ಮುಸ್ಲಿಂ ಅಭ್ಯರ್ಥಿಗಳಲ್ಲಿ ಕೇವಲ 23 ಅಭ್ಯರ್ಥಿಗಳಿಗೆ ಜಯ !

ಉತ್ತರ ಪ್ರದೇಶ ಮತ್ತು ಬಂಗಾಳ ರಾಜ್ಯಗಳಲ್ಲಿ ಹೆಚ್ಚು ವಿಜಯಶಾಲಿ

ನವ ದೆಹಲಿ – ದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ 90 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅದರಲ್ಲಿ ಕೇವಲ 23 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಈ ಸಂಖ್ಯೆ 26 ಇತ್ತು. ಆಗ 136 ಮುಸ್ಲಿಂ ಅಭ್ಯರ್ಥಿಗಳು ನಿಂತಿದ್ದರು. 2014ರಲ್ಲಿ 216 ಅಭ್ಯರ್ಥಿಗಳ ಪೈಕಿ 23 ಮಂದಿ ಸಂಸದರಾಗಿ ಆಯ್ಕೆಯಾಗಿದ್ದರು.

1. ಈಗ ಗೆದ್ದಿರುವ 23 ಅಭ್ಯರ್ಥಿಗಳ ಪೈಕಿ 7 ಕಾಂಗ್ರೆಸ್ ಮತ್ತು 5 ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಆಗಿದ್ದಾರೆ. ಬಂಗಾಳದ 42 ಅಭ್ಯರ್ಥಿಗಳಲ್ಲಿ 6 ಮತ್ತು ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 5 ಸ್ಥಾನಗಳಲ್ಲಿ ಮುಸಲ್ಮಾನರು ಜಯಗಳಿಸಿದ್ದಾರೆ.

2. ಭಾಗ್ಯನಗರ, ಮುರ್ಶಿದಾಬಾದ, ಧೂಬಡಿ, ಬಾರಾಮುಲ್ಲಾ, ಶ್ರೀನಗರ ಮತ್ತು ಲಕ್ಷದ್ವೀಪಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶೇ. 50 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಬಂಗಾಳದ ಬಹರಾಮಪುರ್ ಜಾಗೇವಾರ್ ಮೊದಲ ಮುಸ್ಲಿಂ ಅಭ್ಯರ್ಥಿ ಗೆದ್ದಿದ್ದಾನೆ. ಇಲ್ಲಿ ತೃಣಮೂಲ ಕಾಂಗ್ರೆಸ್‌ನ ಯೂಸುಫ್ ಪಠಾಣ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿದರು.

3. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಕಳೆದ ಬಾರಿಗೆ ಹೋಲಿಸಿದರೆ, 10 ಸ್ಥಾನಗಳ ಮೇಲೆ ಮುಸ್ಲಿಂ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. ಕಳೆದ ಬಾರಿ 4 ಮುಸ್ಲಿಂ ಅಭ್ಯರ್ಥಿಗಳು ಜಯಶಾಲಿಯಾಗಿದ್ದರು.

ಸಂಪಾದಕೀಯ ನಿಲುವು

23 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ, ಈ ಸಂಖ್ಯೆ ಕಡಿಮೆಯಾಗಿದ್ದರೂ, ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳ ಜಯಶಾಲಿಯಾಗಿರುವ ಅನೇಕ ಹಿಂದೂ ಅಭ್ಯರ್ಥಿಗಳು ಹಿಂದೂಗಳಿಗಾಗಿ ಅಲ್ಲ, ಮುಸಲ್ಮಾನರಿಗಾಗಿಯೇ ಹೆಚ್ಚು ಕೆಲಸ ಮಾಡುತ್ತಾರೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು !