ಹಸುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ಮಾಡಿದ ಇಬ್ಬರು ಮತಾಂಧರು ಪರಾರಿ !

ಬೆಳ್ತಂಗಡಿ – ಜಿಲ್ಲೆಯ ಕರಾಯದಲ್ಲಿನ ಸಿರಾಜನು ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ, ಮಾಂಸವನ್ನು ಮಾರಾಟ ಮಾಡುತ್ತಿರುವ ಹಾಗೂ ಪುತ್ತಿಲ್ ಗ್ರಾಮದ ಅಶ್ರಫ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಪೈ ಅವರಿಗೆ ಸಿಕ್ಕಿತು. ಪೊಲೀಸರು ಇಬ್ಬರ ಮನೆಯನ್ನು ತಲುಪಿದಾಗ ಅವರು ಪಲಾಯನ ಮಾಡಿದರು. ಪೊಲೀಸರು ಅವರನ್ನು ಶೋಧಿಸುತ್ತಿದ್ದಾರೆ.

1. ಪೊಲೀಸ್ ಅಶ್ರಫನ ಮನೆ ತಲುಪಿದಾಗ, ಅಶ್ರಫ ವಾಹನದಿಂದ ಹಸುಗಳನ್ನು ಇಳಿಸುತ್ತಿದ್ದನು. ಪೊಲೀಸರನ್ನು ನೋಡಿ ಅವನು ಅಲ್ಲಿಂದ ಪಲಾಯನ ಮಾಡಿದನು. ಪೊಲೀಸರು 2 ಹಸು ಹಾಗೂ ಸಾಗಾಟ ಮಾಡುವ ವಾಹನ ಮತ್ತು ವಾಹನದಲ್ಲಿರುವ ಮೊಬೈಲ ವಶಪಡಿಸಿಕೊಂಡರು.

2. ಆ ನಂತರ ಪೊಲೀಸರು ಗೋಹತ್ಯೆ ಮಾಡುತ್ತಿದ್ದ ಸಿರಾಜ್ ಮನೆಗೆ ಹೋದಾಗ ಅವನು ಅಲ್ಲಿಂದ ಪಲಾಯನ ಮಾಡಿದನು. ಅವನ ಮನೆಯ ಹಿಂದಿರುವ ಶೆಡ್ ನಲ್ಲಿ ಪ್ರಾಣಿ ಮಾಂಸ, ಇದಕ್ಕಾಗಿ ಬಳಸಿದ್ದ ಆಯುಧಗಳು ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅಶ್ರಫ್ ಮತ್ತು ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.