US Congratulates Indians : ಲೋಕಸಭೆ ಚುನಾವಣೆಯ ತೀರ್ಪಿನ ನಂತರ ಭಾರತೀಯರನ್ನು ಅಭಿನಂದಿಸಿದ ಅಮೇರಿಕಾ

ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ದಾವೆಯನ್ನು ತಳ್ಳಿ ಹಾಕಿದೆ !

ವಾಷಿಂಗ್ಟನ (ಅಮೇರಿಕಾ) – ಲೋಕಸಭೆ ಚುನಾವಣೆಯ ತೀರ್ಪು ಬಂದಿದ್ದು, ದೇಶದಲ್ಲಿ ಮತ್ತೊಮ್ಮೆ ಭಾಜಪದ ನೇತೃತ್ವದಲ್ಲಿ ಸರ್ಕಾರ ಸ್ಥಾಪನೆಯಾಗಲಿದೆ. ತೀರ್ಪು ಘೋಷಣೆಯಾದ ಬಳಿಕ ಅಮೇರಿಕಾ ಪ್ರತಿಕ್ರಿಯಿಸಿದೆ. ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಅದನ್ನು ಮುಗಿಸಿರುವ ಬಗ್ಗೆ ಅಮೇರಿಕಾವು ಭಾರತ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಇವರು ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪದ ಆರೋಪಗಳನ್ನು ನಿರಾಕರಿಸಿದರು.

1. ಮ್ಯಾಥ್ಯೂ ಮಿಲ್ಲರ ಮಾತನಾಡಿ, ಅಮೇರಿಕಾದ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕೆ ನಾವು ಭಾರತ ಸರಕಾರ ಮತ್ತು ಮತದಾರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾವು ಅಂತಿಮ ಫಲಿತಾಂಶವನ್ನು ನೋಡಲು ಉತ್ಸುಕರಾಗಿದ್ದೇವೆ, ಎಂದು ಹೇಳಿದರು.

2. ಲೋಕಸಭೆ ಚುನಾವಣೆಯ ಕುರಿತು ವಿಚಾರಿಸಿದ ಪ್ರಶ್ನೆಗೆ ಉತ್ತರಿಸಿದ ಮಿಲ್ಲರ್, ನಾನು ಈ ಚುನಾವಣೆಯಲ್ಲಿ ಗೆದ್ದವರು ಅಥವಾ ಸೋತವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಆರು ವಾರಗಳಲ್ಲಿ ನೋಡಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೊಡ್ಡ ಕಸರತ್ತು ಆಗುತ್ತಿತ್ತು.

3. ಅಮೇರಿಕೆಯೊಂದಿಗೆ ಪಾಶ್ಚಿಮಾತ್ಯ ದೇಶಗಳ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪದ ಆರೋಪಗಳನ್ನು ಖಂಡಿಸುವಾಗ ಮಿಲ್ಲರ ಮಾತನಾಡಿ, ನಾವು ಯಾವಾಗಲೂ ನಮ್ಮ ಅಭಿಪ್ರಾಯವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ವಿದೇಶಿ ಸರಕಾರಗಳೊಂದಿಗೆ ವೈಯಕ್ತಿಕವಾಗಿ ಮಂಡಿಸುತ್ತೇವೆ. ಯಾವಾಗ ನಮಗೆ ಯಾವ ವಿಷಯದ ಚಿಂತೆಯಿರುತ್ತದೆಯೋ, ಆಗ ನಾವು ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತೇವೆ. ನಾನೂ ಅದನ್ನೇ ಮಾಡಿದೆನು. ಭಾರತ ಮತ್ತು ಅಮೇರಿಕಾ ನಡುವಿನ ಪಾಲುದಾರಿಕೆ ಶಾಶ್ವತವಾಗಿ ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.