|
ನವ ದೆಹಲಿ – ಬಹುಜನ ಸಮಾಜ ಪಕ್ಷದ (ಬಿ.ಎಸ್.ಪಿ.) ವಿಶೇಷ ಭಾಗವಾಗಿರುವ ಮುಸ್ಲಿಂ ಸಮುದಾಯಕ್ಕೆ ಚುನಾವಣೆಯಲ್ಲಿ ಸರಿಯಾದ ಪ್ರಾತಿನಿಧ್ಯವನ್ನು ನೀಡಿದ್ದರೂ ಬಿ.ಎಸ್.ಪಿ.ಗೆ ಲಾಭವಾಗಿಲ್ಲ. ಮುಸ್ಲಿಮರು ನಮಗೆ ಮತ ಹಾಕಿಲ್ಲ. ನಾನು ಯಾವಾಗಲೂ ಅವರಿಗೆ ಟಿಕೆಟ್ ನೀಡಿದ್ದೇನೆ. ನನ್ನ ಜಾತಿಯ ಜನರೇ ನಮಗೆ ಮತ ಹಾಕಿದ್ದಾರೆ. ಆದ್ದರಿಂದ ಈಗ ಇಂತಹ ಪರಿಸ್ಥಿತಿಯಲ್ಲಿ, ಪಕ್ಷವು ಸೂಕ್ಷ್ಮವಾಗಿ ಎಚ್ಚರಿಕೆಯಿಂದ ವಿಚಾರ ಮಾಡಿಯೇ ಅವರಿಗೆ (ಮುಸ್ಲಿಮರಿಗೆ) ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು. ಭವಿಷ್ಯದಲ್ಲಿ ಪಕ್ಷವು ದೊಡ್ಡ ನಷ್ಟವನ್ನು ಅನುಭವಿಸುವುದಿಲ್ಲ ಎಂದು ಬಿ.ಎಸ್.ಪಿ. ಅಧ್ಯಕ್ಷೆ ಮಾಯಾವತಿಯವರು ತಮ್ಮ ಪಕ್ಷದ ಸೋಲಿಗೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿದರು. 2019 ರ ಲೋಕಸಭಾ ಚುನಾವಣೆಯಲ್ಲಿ, ಬಿ.ಎಸ್.ಪಿ. 10 ಸ್ಥಾನಗಳಲ್ಲಿ ಗೆದ್ದಿದ್ದರು; ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರ ಏಕೈಕ ಅಭ್ಯರ್ಥಿಯೂ ಗೆದ್ದಿಲ್ಲ. ಈ ಚುನಾವಣೆಯಲ್ಲಿ ಮಾಯಾವತಿಯವರು ಮುಸಲ್ಮಾನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದರು. ಬಿ.ಎಸ್.ಪಿ. ಉತ್ತರ ಪ್ರದೇಶದಲ್ಲಿ 23 ಮುಸ್ಲಿಮರು ಮತ್ತು 15 ಬ್ರಾಹ್ಮಣರಿಗೆ ಟಿಕೆಟ್ ನೀಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಅವರು 6 ಮುಸ್ಲಿಮರಿಗೆ ಉಮೇದುವಾರಿಕೆ ನೀಡಿದ್ದರು.
ಮಾಯಾವತಿ ಮಾತು ಮುಂದುವರಿಸಿ, ಈ ಚುನಾವಣೆಯಲ್ಲಿ ವಿಶೇಷವಾಗಿ ಇಡೀ ದೇಶದ ಗಮನ ಉತ್ತರ ಪ್ರದೇಶದ ಮೇಲಿತ್ತು ಮತ್ತು ಇಲ್ಲಿನ ತೀರ್ಪು ಜನರ ಎದುರು ಇದೆ. ನಮ್ಮ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಪ್ರತಿಯೊಂದು ಸ್ತರದಲ್ಲಿಯೂ ಅದನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತೇವೆ ಮತ್ತು ಪಕ್ಷದ ಹಿತದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಂದು ಪಕ್ಷಕ್ಕೂ ಇದು ಅರಿವಾದ ಬಳಿಕವೇ ಓಲೈಕೆ ರಾಜಕಾರಣ ನಿಲ್ಲುವುದು ! |