Congress Guarantee: ‘ಗ್ಯಾರಂಟಿ ಕಾರ್ಡ್’ಗಾಗಿ ಉತ್ತರ ಪ್ರದೇಶದ ಕಾಂಗ್ರೆಸ್‌ ನ ಕೇಂದ್ರ ಕಚೇರಿ ತಲುಪಿದ ಮುಸ್ಲಿಂ ಮಹಿಳೆಯರು !

ಚುನಾವಣೆಯಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ವಾರ್ಷಿಕ 1 ಲಕ್ಷ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಲೋಕಸಭೆ ಚುನಾವಣೆ ಫಲಿತಾಂಶದ ಎರಡನೇ ದಿನ ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಕ್ನೋದಲ್ಲಿ) ಹೊಸ ದೃಶ್ಯಕ್ಕೆ ಸಾಕ್ಷಿಯಾಯಿತು. ಜೂನ್ 5 ರ ಬೆಳಿಗ್ಗೆಯಿಂದ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮಹಿಳೆಯರು ಗ್ಯಾರಂಟಿ ಕಾರ್ಡ್ ಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಹಲವು ಮಹಿಳೆಯರು ತಮ್ಮ ಈಗಾಗಲೇ ಪಡೆದಿರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಸಂಖ್ಯೆಗಳನ್ನು ಭರ್ತಿ ಮಾಡಿ ಪಕ್ಷದ ಕಚೇರಿಗೆ ಸಲ್ಲಿಸಿದರು. ಗ್ಯಾರಂಟಿ ಕಾರ್ಡ್ ಸಲ್ಲಿಸಿದ ನಂತರ ಕಾಂಗ್ರೆಸ್ ಕಚೇರಿಯಿಂದ ರಸೀದಿ ಪಡೆದಿದ್ದೇವೆ ಎಂದು ಕೆಲವು ಮಹಿಳೆಯರು ಹೇಳಿಕೊಳ್ಳುತ್ತಾರೆ.

ಮುಸಲ್ಮಾನ ಮಹಿಳೆಯರು, ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಹಣದ ಭರವಸೆ ನೀಡಿತ್ತು, ಇಂಡಿ ಮೈತ್ರಿಕೂಟ (ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು) ಉತ್ತಮವಾಗಿ ಕಾರ್ಯನಿರ್ವಹಿಸಿದೆ; ಆದ್ದರಿಂದ ನಾವು ಗ್ಯಾರಂಟಿ ಪಡೆಯಲು ಇಲ್ಲಿ ಬಂದಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ನ ಗ್ಯಾರಂಟಿ ಏನು ?

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ‘ಗ್ಯಾರಂಟಿ’ಯಲ್ಲಿ ಉಲ್ಲೇಖಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 3 ರಂದು ನವದೆಹಲಿಯ ಪಕ್ಷದ ಕಚೇರಿಯಿಂದ ಈ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಗ್ಯಾರಂಟಿಯನ್ನು ‘ಯುವ ನ್ಯಾಯ ಯೋಜನೆ’ ಅಡಿಯಲ್ಲಿ, ಪ್ರತಿ ಸುಶಿಕ್ಷಿತ ಯುವಕರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಮತ್ತು ‘ನಾರಿ ನ್ಯಾಯ ಯೋಜನೆ’ ಅಡಿಯಲ್ಲಿ, ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ ಇದಲ್ಲದೆ, ‘ಎಂಜಿಎನ್‌ಆರ್‌ಇಜಿಎ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ) ಕೂಲಿಯನ್ನು ದಿನಕ್ಕೆ ಕನಿಷ್ಠ 400 ರೂಪಾಯಿ ನೀಡಲಾಗುವುದು ಎಂದು ಹೇಳಲಾಗಿತ್ತು. ಅದೇ ಸಮಯದಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕನಿಷ್ಠ ಖಾತರಿ ಬೆಲೆಯ ಕಾನೂನುಬದ್ಧ ಖಾತರಿಯೊಂದಿಗೆ ರೈತರಿಗೆ ಸಾಲ ಮನ್ನಾದ ಭರವಸೆ ನೀಡಲಾಗಿದೆ. ಈ ಗ್ಯಾರಂಟಿ ಕಾರ್ಡ್ ನಲ್ಲಿ ಮನೆಯಲ್ಲಿರುವ ಮತದಾರರ ಹೆಸರು, ವಯಸ್ಸು, ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿ ತುಂಬಲು ಜಾಗ ಇಡಲಾಗಿದೆ. ಜೊತೆಗೆ ‘ಕ್ಯೂಆರ್ ಕೋಡ್’ ಕೂಡ ನೀಡಲಾಗಿದೆ. ಮನೆ ಮನೆಗೆ ತೆರಳಿ ಭರವಸೆ ಹಂಚುವ ಜವಾಬ್ದಾರಿಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗಿತ್ತು. ಈಗ ಚುನಾವಣೆ ಮುಗಿದರೂ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ನ ಇದೇ ಆಶ್ವಾಸನೆಯಿಂದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ್ದರಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದರೆ ತಪ್ಪಾಗದು ! ಅಂದರೆ ಮತ್ತೊಮ್ಮೆ ಮುಸಲ್ಮಾನರು ಮಾತ್ರ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ ಎನ್ನುವುದನ್ನು ಹಿಂದೂಗಳು ಅರಿತುಕೊಳ್ಳಬೇಕು !