BSF Soldier Beaten: ಗಡಿಯಲ್ಲಿ ಬಾಂಗ್ಲಾದೇಶದ ಕಳ್ಳಸಾಗಣೆದಾರರಿಂದ ಭಾರತೀಯ ಸೇನೆಯ ಸಿಬ್ಬಂದಿಯ ಮೇಲೆ ಹಲ್ಲೆ

ಗಡಿಯಾಚೆಗೆ ಎಳೆದೊಯ್ಯುವ ಪ್ರಯತ್ನ

ಕೋಲಕಾತಾ (ಬಂಗಾಳ) – ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಭೋಲೆ ಹೆಸರಿನ ಭಾರತೀಯ ಸೈನಿಕನ ಮೇಲೆ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಥಳಿಸಿ ಅವನನ್ನು ಗಡಿಯಾಚೆಗೆ ಒಯ್ಯಲು ಪ್ರಯತ್ನಿಸಿದರು. ಈ ಘಟನೆ ಜೂನ್ 2 ರಂದು ಮಧ್ಯಾಹ್ನ 1:30 ರ ಸುಮಾರಿಗೆ ನಡೆದಿದೆಯೆಂದು ಗಡಿ ಭದ್ರತಾ ಪಡೆ ತಿಳಿಸಿದೆ. ಗಡಿ ಭದ್ರತಾ ಪಡೆ ಅಧಿಕಾರಿಗಳು ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳನ್ನು ಸಂಪರ್ಕಿಸಿ ವಿರೋಧ ವ್ಯಕ್ತಪಡಿಸಿದರು.

ಎ.ಎನ್.ಐ. ಸುದ್ದಿ ಸಂಸ್ಥೆಯು ಗಡಿ ಭದ್ರತಾ ಪಡೆ ನೀಡಿದ ವರದಿಯ ಪ್ರಕಾರ ಸೈನಿಕ ಭೋಲೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿಯೋಜನೆಗೊಂಡಿದ್ದಾಗ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಗುಂಪು ಬಾಂಗ್ಲಾದೇಶದ ಗಡಿಯನ್ನು ದಾಟಿ ಆ ಸ್ಥಳಕ್ಕೆ ಬಂದರು. ಸಕ್ಕರೆ ಕಳ್ಳತನ ಮಾಡುವ ಉದ್ದೇಶದಿಂದ ಗುಂಪಿನಲ್ಲಿದ್ದ ಕಳ್ಳರು ಆ ಸ್ಥಳಕ್ಕೆ ಬಂದಿದ್ದರು. ಆ ಸಮಯದಲ್ಲಿ ಆ ಕಳ್ಳಸಾಗಾಣಿಕೆದಾರರು ಭೋಲೆಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಅವನನ್ನು ಸುತ್ತುವರೆದರು. ಹಾಗೂ ಈ ಕಳ್ಳಸಾಗಾಣಿಕೆದಾರರು ಭೋಲೆಯನ್ನು ಬಿದಿರು ಮತ್ತು ಕಬ್ಬಿಣದ ಸಲಾಕೆಯಿಂದ ಥಳಿಸಿದರು. ಭೋಲೆಯನ್ನು ಎಳೆದುಕೊಂಡು ಬಾಂಗ್ಲಾದೇಶಕ್ಕೆ ಒಯ್ಯಲು ಪ್ರಯತ್ನಿಸಿದರು. ಅವರು ಭೋಲೆ ಬಳಿಯಿದ್ದ ರೇಡಿಯೋ ಸೆಟ್ ಮತ್ತು ರೈಫಲ್ ಕಸಿದುಕೊಂಡರು; ಆದರೆ ಅದೇ ಸಮಯದಲ್ಲಿ ಭೋಲೆ ಅವರ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಈ ಘಟನೆಯಲ್ಲಿ ಭೋಲೆ ಗಾಯಗೊಂಡಿದ್ದು, ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೋಲೆ ಬಳಿಯಿದ್ದ ರೈಫಲ್ ಮತ್ತು ರೇಡಿಯೋ ಸೆಟ ಬಾಂಗ್ಲಾದೇಶದ ಅಧಿಕಾರಿಗಳು ಭಾರತಕ್ಕೆ ಮರಳಿಸಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ನಡೆಯುತ್ತದೆಯೆನ್ನುವುದು ಜಗಜ್ಜಾಹೀರಾಗಿರುವಾಗ ಭಾರತ ಅದನ್ನು ನಷ್ಟಗೊಳಿಸಲು ಏಕೆ ಪ್ರಯತ್ನಿಸುತ್ತಿಲ್ಲ ?