Sweden Mosque : ಸ್ವೀಡನ್‌ನಲ್ಲಿ ಮಸೀದಿ ಹೊರಗೆ ಸತ್ತ ಹಂದಿ ಪತ್ತೆ !

ಮಸೀದಿಯ ಹೊರಗೆ ಎಸೆದ ಸತ್ತ ಹಂದಿ

ಸ್ಕೋವ್ಡೆ (ಸ್ವೀಡನ್) – ಇಲ್ಲಿ ಮೇ 28 ರ ರಾತ್ರಿ ಅಪರಿಚಿತರು ಮಸೀದಿಯ ಹೊರಗೆ ಸತ್ತ ಹಂದಿಯನ್ನು ಎಸೆದಿದ್ದಾರೆ. ಈ ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ. ಮುಸಲ್ಮಾನರಲ್ಲಿ ಹಂದಿಯನ್ನು ನಿಷೇಧಿಸಲಾಗಿದೆ.

ಒಬ್ಬ ವ್ಯಕ್ತಿ ತಡರಾತ್ರಿ ಕಾರಿನ ಮೂಲಕ ಮಸೀದಿಯ ಬಳಿ ಬಂದು ಹಂದಿಯನ್ನು ಎಸೆದಿದ್ದಾನೆ, ಎಂದು ಮಸೀದಿ ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥ ಸ್ಮಾಜೋ ಸಹಾತ್ ಹೇಳಿದ್ದಾರೆ. ಆ ವ್ಯಕ್ತಿ ಯಾರು ? ಅಥವಾ ಅದು ಎಲ್ಲಿಂದ ಬಂತು ?, ಇದು ನಮಗೆ ಗೊತ್ತಿಲ್ಲ. ಈ ಮಸೀದಿಯನ್ನು ಒಂದು ವರ್ಷದ ಹಿಂದೆ ಆರಂಭಿಸಲಾಗಿದೆ. ಅಂದಿನಿಂದ ಮಸೀದಿಗೆ ಯಾವುದೇ ಬೆದರಿಕೆ ಬಂದಿಲ್ಲ.

ನಿರಾಶ್ರಿತ ಮುಸ್ಲಿಮರ ಸಮಸ್ಯೆಯ ಸಂಕಷ್ಟದಲ್ಲಿ ಸಿಲುಕಿರುವ ಸ್ವೀಡನ್ ನಲ್ಲಿ ಅನೇಕ ದಿನಗಳಿಂದ ಮುಸ್ಲಿಮರ ವಿರುದ್ಧ ಘಟನೆಗಳು ನಡೆಯುತ್ತಲೇ ಇವೆ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ, ಸರ್ಕಾರವು ಒಂದು ಪ್ರಕರಣದಲ್ಲಿ ಜನರಿಗೆ ಕುರಾನ್‌ಗಳನ್ನು ಸುಡಲು ಅನುಮತಿ ನೀಡಿತ್ತು.