ಜರ್ಮನಿಯಲ್ಲಿ ಇಸ್ಲಾಂ ವಿರೋಧಿ ಸಭೆಯಲ್ಲಿ ಮುಸಲ್ಮಾನನಿಂದ ವಕ್ತಾರರ ಮೇಲೆ ಚಾಕುವಿನಿಂದ ದಾಳಿ

ಪೊಲೀಸರು ಮುಸಲ್ಮಾನನ್ನು ಗುಂಡಿಕ್ಕಿ ಕೊಂದರು !

ಮ್ಯಾನಹೆಮ (ಜರ್ಮನಿ) – ಇಲ್ಲಿ ಸಭೆಯೊಂದರಲ್ಲಿ ಜಿಹಾದಿ ಮುಸಲ್ಮಾನರು ನಡೆಸಿದ ದಾಳಿಯಲ್ಲಿ ವಕ್ತಾರ ಮತ್ತು ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಗುಂಡಿಕ್ಕಿ ಈ ಜಿಹಾದಿ ಮುಸಲ್ಮಾನನ್ನು ಕೊಂದರು.

‘ಸಿಟಿಜನ್ಸ್ ಮೂವ್ ಮೆಂಟ್ ಪ್ಯಾಕ್ಸ್ ಯುರೋಪ್’ ಈ ಗುಂಪೊಂದು ಯುರೋಪ್ ನ ಇಸ್ಲಾಮೀಕರಣದ ವಿರುದ್ಧ ಧ್ವನಿ ಎತ್ತುತ್ತಿದೆ. ಮ್ಯಾನಹೆಮ್ ನಗರದಲ್ಲಿ ಈ ಗುಂಪು ಸಭೆ ಆಯೋಜಿಸಿತ್ತು. ಯೂಟ್ಯೂಬ್ ನಲ್ಲಿ ಇದರ ನೇರ ಪ್ರಸಾರ ಮಾಡಲಾಗುತ್ತಿತ್ತು. ಅದೇ ಸಮಯದಲ್ಲಿ, ಒಬ್ಬ ಜಿಹಾದಿ ಮುಸಲ್ಮಾನನು ವೇದಿಕೆಯ ಮೇಲೆ ಹೋಗಿ ಮೈಕೆಲ್ ಸ್ಟರ್ಜೆನ್ಬರ್ಗ್ ಈ ವಕ್ತಾರರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದನು. ಆಗ ಪೊಲೀಸರು ಆತನನ್ನು ತಡೆಯಲು ಪ್ರಯತ್ನಿಸಿದರು; ಆದರೆ ಅವನು ಓರ್ವ ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದನು. ಆಗ ಮತ್ತೊಬ್ಬ ಪೊಲೀಸನು ಅವನ ಮೇಲೆ ಗುಂಡು ಹಾರಿಸಿದನು. ಆಗ ಅವನು ಕೆಳಗೆ ಬಿದ್ದನು. ಪೊಲೀಸರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು; ಆದರೆ ಅಷ್ಟರಲ್ಲಿ ಅವನು ಮರಣ ಹೊಂದಿದ್ದನು.

ಜರ್ಮನಿಯಲ್ಲಿ 10 ಲಕ್ಷ ನಿರಾಶ್ರಿತ ಮುಸಲ್ಮಾನರು !

ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಜರ್ಮನಿಯಲ್ಲಿ ಮುಸಲ್ಮಾನ ನಿರಾಶ್ರಿತರ ಬಿಕ್ಕಟ್ಟಿನಿಂದಾಗಿ ಇಲ್ಲಿ ವಿವಾದಗಳು ನಡೆಯುತ್ತಿವೆ. ಜರ್ಮನಿಯಲ್ಲಿ ಮುಸಲ್ಮಾನ ನಿರಾಶ್ರಿತರ ಸಂಖ್ಯೆಯು ಭರದಿಂದ ಹೆಚ್ಚಳವಾಗಿದೆ. 2015 ರಿಂದ ಇಲ್ಲಿಯವರೆಗೆ 10 ಲಕ್ಷ ಮುಸಲ್ಮಾನರು ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.

ಸಂಪಾದಕೀಯ ನಿಲುವು

ಹಿಂಸೆ ಮಾಡುವವರ ವಿರುದ್ಧ ಹೇಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು?, ಎನ್ನುವುದನ್ನು ಜರ್ಮನಿಯ ಪೊಲೀಸರು ತೋರಿಸಿ ಹಲವರ ರಕ್ಷಣೆಯನ್ನು ಮಾಡಿದ್ದಾರೆ !