ಒಂದು ಮತಕ್ಕೆ 1 ಸಾವಿರದ 400 ರೂಪಾಯಿ ಖರ್ಚು !
ನವ ದೆಹಲಿ – 2019 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ವರ್ಷ ಸರಿಸುಮಾರು ದುಪ್ಪಟ್ಟು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. 2019ರ ಚುನಾವಣೆಗೆ 55 ರಿಂದ 60 ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗಿತ್ತು. ‘ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ ನ ಅಂದಾಜಿನಂತೆ, ಈ ವರ್ಷದ ಲೋಕಸಭೆ ಚುನಾವಣೆಯ ವೆಚ್ಚ 1 ಲಕ್ಷದ 35 ಸಾವಿರ ಕೋಟಿ ರೂಪಾಯಿಗಳಷ್ಟು ತಲುಪುವ ಸಾಧ್ಯತೆಯಿದೆ. ಇದರಿಂದಾಗಿ ಒಂದು ಮತದ ಬೆಲೆ ಅಂದರೆ ಒಂದು ಮತದ ಹಿಂದೆ ಸರಿಸುಮಾರು ಅಂದಾಜು 1 ಸಾವಿರ 400 ರೂಪಾಯಿ ವೆಚ್ಚವಾಗಿದೆ. 2020ರಲ್ಲಿ ಅಮೇರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೆ ವೆಚ್ಚ ಮಾಡಿದ್ದಕ್ಕಿಂತ ಈ ವರ್ಷ ಭಾರತದ ಲೋಕಸಭೆ ಚುನಾವಣೆಗೆ ಮಾಡಿದ ವೆಚ್ಚ ಅಧಿಕವಾಗಿದೆ. ಆಗ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ಆ ಸಮಯದಲ್ಲಿ 1 ಲಕ್ಷದ 20 ಸಾವಿರ ಕೋಟಿ ವೆಚ್ಚವಾಗಿತ್ತು.
1. ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿ 95 ಲಕ್ಷ ರೂಪಾಯಿವರೆಗೆ ಖರ್ಚು ಮಾಡಬಹುದು. ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿ 28 ಲಕ್ಷದಿಂದ 40 ಲಕ್ಷ ರೂಪಾಯಿ ಇದೆ. ಅರುಣಾಚಲ ಪ್ರದೇಶದಂತಹ ಸಣ್ಣ ರಾಜ್ಯದಲ್ಲಿ ಒಬ್ಬ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ 75 ಲಕ್ಷ ರೂಪಾಯಿಗಳಾದರೆ, ವಿಧಾನಸಭೆ ಚುನಾವಣೆಯಲ್ಲಿ 28 ಲಕ್ಷ ರೂಪಾಯಿಯಷ್ಟು ವೆಚ್ಚ ಮಾಡಬಹುದು. ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ಲೋಕಸಭೆ ಚುನಾವಣೆ 1951-52ರಲ್ಲಿ ಮೊದಲ ಬಾರಿಗೆ ನಡೆಯಿತು. ಆ ಸಮಯದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ 25 ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಲು ಅನುಮತಿಯಿತ್ತು; ಆದರೆ ಈಗ ಅದು ಸರಿಸುಮಾರು ಶೇ. 300 ರಷ್ಟು ಹೆಚ್ಚಳವಾಗಿದೆ.
2. ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಪ್ರತಿ ವರ್ಷ ವೆಚ್ಚದ ಮಾಹಿತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಚುನಾವಣಾ ನಿಧಿಯ ಮಾಹಿತಿ ನೀಡಬೇಕಾಗುತ್ತದೆ. ಇದಲ್ಲದೇ ಚುನಾವಣೆ ಮುಗಿದ ನಂತರ ಮುಂದಿನ 75 ದಿನಗಳಲ್ಲಿ ವೆಚ್ಚದ ವಿವರ ನೀಡಬೇಕು. ಈ ಮಾಹಿತಿಯನ್ನು ಆಯೋಗವು ತನ್ನ ಸಂಕೇತ ಸ್ಥಳದ ಮೇಲೆ ಪ್ರಸಾರ ಮಾಡುತ್ತದೆ.
ಸಂಪಾದಕೀಯ ನಿಲುವುಇಷ್ಟು ಹಣವನ್ನು ಖರ್ಚು ಮಾಡಿದರೂ ಜನರು ಮತ ಹಾಕಲು ಹೋಗುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳ ಬಗ್ಗೆಯೂ ಈಗ ಚರ್ಚೆ ನಡೆಸುವುದು ಅಗತ್ಯವಿದೆ ! |