ಕೊಲಂಬೊ (ಶ್ರೀಲಂಕಾ) – ಕೆಲವು ದಿನಗಳ ಹಿಂದೆ ಗುಜರಾತ್‌ನ ಕರ್ಣಾವತಿಯಿಂದ ಬಂಧಿತರಾಗಿದ್ದ ಇಸ್ಲಾಮಿಕ್ ಸ್ಟೇಟ್‌ನ ನಾಲ್ವರು ಭಯೋತ್ಪಾದಕರಾದ ಮೊಹಮ್ಮದ್ ನುಸ್ರತ್, ಮೊಹಮ್ಮದ್ ಫಾರೂಕ್, ಮೊಹಮ್ಮದ್ ನಫ್ರಾನ್ ಮತ್ತು ಮೊಹಮ್ಮದ್ ರಸದೀನ್ ಇವರ ಸಹಚರರನ್ನು ಶ್ರೀಲಂಕಾ ಪೊಲೀಸರು ತಮ್ಮ ದೇಶದಿಂದ ಬಂಧಿಸಿದ್ದಾರೆ. ಅವನ ಹೆಸರು ಜೆರಾರ್ಡ್ ಪುಷ್ಪರಾಜ ಉಸ್ಮಾನ್ ಎಂದಿದೆ. ಶ್ರೀಲಂಕಾ ಪೊಲೀಸರು ಇತ್ತೀಚೆಗೆ ಆತನು ಇರುವ ಸ್ಥಳದ ಬಗ್ಗೆ ಯಾರಾದರೂ ಮಾಹಿತಿ ನೀಡಿದಲ್ಲಿ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಕರ್ಣಾವತಿಯಿಂದ ಬಂಧಿತರಾದ ಭಯೋತ್ಪಾದಕರು ಶ್ರೀಲಂಕಾದ ನಾಗರಿಕರಾಗಿದ್ದಾರೆ. ಅವರು ಭಾರತದಲ್ಲಿ ರಕ್ತಪಾತ ಮಾಡುವವರಿದ್ದರು.
ಕರ್ಣಾವತಿಯಲ್ಲಿ ಬಂಧಿತರಾಗಿರುವ ಭಯೋತ್ಪಾದಕರು ವಿಚಾರಣೆ ವೇಳೆ, ತಮಗೆ ಈ ಹಿಂದೆ ‘ನ್ಯಾಷನಲ್ ತೌಹೀದ್ ಜಮಾತ್’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಇತ್ತು ಎಂದು ಹೇಳಿದ್ದಾರೆ. ನಂತರ ಅವರು ಇಸ್ಲಾಮಿಕ್ ಸ್ಟೇಟ್‌ಗಾಗಿ ಕೆಲಸ ಮಾಡತೊಡಗಿದರು.