ಪಂಢರಪುರ – ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ಕೆಲಸ ನಡೆಯುತ್ತಿರುವಾಗ ಮೇ 30 ರಂದು ಮಧ್ಯರಾತ್ರಿ 2 ಗಂಟೆಗೆ ಒಂದು ನೆಲಮಾಳಿಗೆ ಪತ್ತೆಯಾಗಿದೆ. ಈ ನೆಲಮಾಳಿಗೆಯು 6 ಅಡಿ ಉದ್ದ ಮತ್ತು 6 ಅಡಿ ಅಗಲವಿದೆ. ಮೇ 31 ರಂದು, ಪುರಾತತ್ವ ಇಲಾಖೆ, ದೇವಾಲಯ ಸಮಿತಿ ಮತ್ತು ವಾರಕರಿ ಇವರ ಸಮ್ಮುಖದಲ್ಲಿ ನೆಲಮಾಳಿಗೆಯನ್ನು ಪರಿಶೀಲಿಸಲಾಯಿತು. ಈ ಕೋಣೆಯಲ್ಲಿ ಹಲವು ವಿಗ್ರಹಗಳಿರುವುದು ಗಮನಕ್ಕೆ ಬಂದಿದೆ. ಈ ಕೋಣೆಯಲ್ಲಿ ಮೂರೂವರೆ ಅಡಿ ಎತ್ತರದ ದೇವಿಯ ವಿಗ್ರಹ ಹಾಗೆಯೇ ಇತರ ವಿಗ್ರಹಗಳು ಕಂಡುಬಂದಿವೆ. ದೇವಿಯ ವಿಗ್ರಹವು 12ನೇ ಅಥವಾ 13ನೇ ಶತಮಾನದ್ದು ಇರಬಹುದು ಎಂದು ಅಂದಾಜಿಲಾಗಿದೆ. ಈ ನೆಲಮಾಳಿಗೆಯಲ್ಲಿ ವಿಗ್ರಹಗಳ ಜೊತೆಗೆ ಕೆಲವು ನಾಣ್ಯಗಳೂ ದೊರೆತಿವೆ. ಈ ಎಲ್ಲಾ ಪತ್ತೆಯಾದ ವಿಗ್ರಹಗಳು ಮತ್ತು ನಾಣ್ಯಗಳ ಮೇಲೆ ಮತ್ತಷ್ಟು ಸಂಶೋಧನೆ ಮಾಡಲಾಗುವುದು ಎಂದಿದ್ದಾರೆ.