Railway Stations Developed like Airports : ದೇಶದಾದ್ಯಂತ 1 ಸಾವಿರದ 300 ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿಪಡಿಸಲಾಗುತ್ತಿದೆ !

12 ಮೀಟರ್ ಅಗಲದ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ !

ಜೈಪುರ (ರಾಜಸ್ಥಾನ) – ದೇಶದಾದ್ಯಂತ 1300 ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಪುನರ್ ವಿಕಾಸ ಮತ್ತು ‘ಅಮೃತ್ ಭಾರತ್ ಸ್ಟೇಷನ್ ಡೆವಲಪ್‌ಮೆಂಟ್ ಸ್ಕೀಮ್’ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, ರೈಲ್ವೆ ಸಚಿವಾಲಯವು ಫೆಬ್ರವರಿ 2023 ರಿಂದ ದೇಶಾದ್ಯಂತ 1,275 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಪ್ರಾರಂಭಿಸಿದೆ. ಈ ಯೋಜನೆಗಾಗಿ 25 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಂತಹ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಭಿವೃದ್ಧಿ ಆಗುತ್ತಿರುವ ನಿಲ್ದಾಣಗಳಲ್ಲಿ 12 ಮೀಟರ್ ಅಗಲದ ಸೇತುವೆಗಳನ್ನು (ಎಫ್.ಒ.ಬಿ. – ಉಚಿತ ಆನ್ ಬೋರ್ಡ್) ನಿರ್ಮಿಸಲಾಗುವುದು. ಈ ಸೇತುವೆಯನ್ನು ‘ಪ್ಲಾಟ್‌ಫಾರ್ಮ್’ಗೆ ಜೋಡಿಸಲಾಗುವುದಿಲ್ಲ.