ಮಸ್ಕತ್ (ಓಮನ್) ನಿಂದ ಭಾರತಕ್ಕೆ ಬರುತ್ತಿದ್ದ ವಿಮಾನ !
ಕಣ್ಣೂರ್ (ಕೇರಳ) – ಏರ್ ಇಂಡಿಯಾ ವಿಮಾನದ ಗಗನಸಖಿಯನ್ನು ೧ ಕೆಜಿ ಚಿನ್ನದ ಕಳ್ಳ ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆಶ್ಚರ್ಯವೆಂದರೆ ಆಕೆ ತನ್ನ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದಳು. ಸುರಭೀ ಖಾತುನ್ ಎಂಬ ಹೆಸರಿನ ಈ ಗಗನಸಖಿಯ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ಬಳಿಕ ಆಕೆಯನ್ನು ಬಂಧಿಸಲಾಯಿತು.
ಪೊಲೀಸರ ವಿಚಾರಣೆಯಲ್ಲಿ ಈಕೆ ಈ ರೀತಿ ಅನೇಕ ಬಾರಿ ಚಿನ್ನದ ಕಳ್ಳ ಸಾಗಾಣಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕಳ್ಳಸಾಗಾಣೆಯಲ್ಲಿ ವಿಮಾನದಲ್ಲಿನ ಇತರ ಸಿಬ್ಬಂದಿಗಳು ಕೂಡ ಸಹಭಾಗಿ ಇರಬಹುದು, ಎಂದು ಹೇಳಲಾಗಿದೆ. ಆದ್ದರಿಂದ ಅನ್ಯರನ್ನೂ ಕೂಡ ಬಂಧಿಸುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಈ ರೀತಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವುಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ? |