ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರ ನಡೆಸಿದ್ದನು !
ನವದೆಹಲಿ – ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿನ ಗೀತಾ ಕಾಲೋನಿ ಪ್ರದೇಶದಲ್ಲಿ ೨೫ ವರ್ಷದ ಮಹಿಳೆಯ ಮೇಲೆ ರಿಕ್ಷಾ ಚಾಲಕನಾದ ಮಹಮ್ಮದ ಓಮರನು ಬಲಾತ್ಕಾರ ಮಾಡಿದ್ದಾನೆ. ಓಮರನು ರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ತಿಂಡಿಯಲ್ಲಿ ಮಾದಕ ಪದಾರ್ಥ ಬೆರೆಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಓಮರನನ್ನು ಬಂಧಿಸಿದ್ದಾರೆ.
ಪೊಲೀಸ ಆಯುಕ್ತರಾದ (ಉತ್ತರ ದೆಹಲಿ) ಮನೋಜ ಕುಮಾರ ಮೀನಾರವರು ಮಾತನಾಡುತ್ತ, ಮೇ ೨೬ ರಂದು ಕೊತವಾಲಿ ಪೊಲೀಸ ಠಾಣೆಗೆ ಬಲಾತ್ಕಾರ ಮತ್ತು ದೋಚಿರುವ ವಿಷಯದಲ್ಲಿ ದೂರವಾಣಿ ಕರೆ ಬಂದಿತ್ತು. ದೂರಿನ ಆಧಾರದಲ್ಲಿ ಪೊಲೀಸರು ಘಟನಾಸ್ಥಳವನ್ನು ತಲುಪಿದಾಗ, ಅಲ್ಲಿ ಸಂತ್ರಸ್ತೆಯು ಗಾಯಗೊಂಡಿರುವ ಸ್ಥಿತಿಯಲ್ಲಿ ಇದ್ದಳು ಮತ್ತು ಆಕೆಗೆ ರಕ್ತಸ್ರಾವವಾಗುತ್ತಿತ್ತು. ಆ ಮಹಿಳೆಯ ಪಕ್ಕದಲ್ಲಿಯೇ ಆಕೆಯ ೩ ವರ್ಷದ ಮಗನಿದ್ದನು. ಪೊಲೀಸರು ತಕ್ಷಣ ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದರು. ಆಕೆಯ ವೈದ್ಯಕೀಯ ತಪಾಸಣೆಯಲ್ಲಿ ಆರೋಪಿಯು ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವುದು ಬೆಳಕಿಗೆ ಬಂದಿತು.
ಸಂತ್ರಸ್ತೆಯ ಪರಿಸ್ಥಿತಿ ಸುಧಾರಿಸಿದ ನಂತರ ಆಕೆ ಪೊಲೀಸರಿಗೆ ಮಾಹಿತಿ ನೀಡಿದಳು. ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ ಆಕೆಯು ಬಿಹಾರದ ನಿವಾಸಿಯಾಗಿದ್ದು ಪಂಜಾಬಿಗೆ ಆಕೆಯ ಪತಿಯನ್ನು ಭೇಟಿಯಾಗಲು ಹೋಗುತ್ತಿದ್ದಳು. ಮೇ ೨೬ ರಂದು ಆಕೆ ನವದೆಹಲಿ ರೈಲು ನಿಲ್ದಾಣದಲ್ಲಿ ಇಳಿದು ಹತ್ತಿರದ ಮಾರುಕಟ್ಟೆಗೆ ಹೋದಳು. ಹಿಂತಿರುಗಿ ಬರುವಾಗ ಆಕೆ ಇ-ರೀಕ್ಷ ಮಾಡಿದಳು. ಆಗ ರಿಕ್ಷಾ ಚಾಲಕನು ಆಕೆಗೆ ಕುಡಿಯಲು ತಂಪು ಪಾನೀಯ ನೀಡಿದನು. ತಂಪು ಪಾನೀಯ ಕುಡಿದ ನಂತರ ಆಕೆಗೆ ಪ್ರಜ್ಞೆ ತಪ್ಪಿತು. ಆನಂತರ ಆರೋಪಿಯು ಆ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊದಲಿಗೆ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಆಕೆಯು ಎಚ್ಚರಗೊಂಡಂತೆ ಅವನನ್ನು ವಿರೋಧಿಸತೊಡಗಿದಳು. ಆಗ ಆರೋಪಿಯು ಆ ಮಹಿಳೆಯನ್ನು ಸುಮ್ಮನಾಗಿಸಲು ಆಕೆಯ ತಲೆಯ ಮೇಲೆ ಇಟ್ಟಿಗೆಯಿಂದ ಹೊಡೆದನು. ಆ ಮಹಿಳೆ ಪುನಃ ಪ್ರಜ್ಞೆ ತಪ್ಪಿದಳು. ಎಚ್ಚರಗೊಂಡಾಗ ಆಕೆಗೆ ತನ್ನ ಮೊಬೈಲ್ ಮತ್ತು ೩ ಸಾವಿರ ರೂಪಾಯಿ ನಗದು ಕಳುವಾಗಿರುವುದು ತಿಳಿಯಿತು. ಪೊಲೀಸರು ಮಹಿಳೆಯ ದೂರಿನ ಮೇರೆಗೆ ತನಿಖೆ ಆರಂಭಿಸಿದರು. ಸುಮಾರು ೫೦೦ ಸಿಸಿಟಿವಿ ಚಿತ್ರೀಕರಣ ಪರಿಶೀಲಿಸಿದ ನಂತರ ಇ-ರಿಕ್ಷಾದ ಗುರುತು ಪತ್ತೆಯಾಯಿತು ಮತ್ತು ಆರೋಪಿಯ ಹೆಸರು ತಿಳಿಯಿತು. ಅನಂತರ ಪೊಲೀಸರು ಶೋಧ ಕಾರ್ಯ ನಡೆಸಿ ಇ-ರಿಕ್ಷಾ ಚಾಲಕನಾದ ಓಮರನನ್ನು ವಶಕ್ಕೆ ಪಡೆದರು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಂಪಾದಕೀಯ ನಿಲುವುದೇಶದ ರಾಜಧಾನಿಯು ಮಹಿಳೆಯರಿಗಾಗಿ ಅಸುರಕ್ಷಿತವಾಗಿರುವುದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದವಾಗಿದೆ ! |