ನವ ದೆಹಲಿ – ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ತಿರುವನಂತಪುರಂ (ಕೇರಳ) ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ಶಶಿ ತರೂರು ಇವರ ಆಪ್ತ ಸಹಾಯಕ ಶಿವಕುಮಾರ್ ಇವನನ್ನು ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಸ್ಟಮ್ ಸುಂಕ ಇಲಾಖೆಯಿಂದ ಮೇ ೨೯ ರಂದು ಸಂಜೆ ಇಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ೩ ರಲ್ಲಿ ಶಿವಕುಮಾರ್ ಇವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವನಿಂದ ಒಟ್ಟು ೫೦೦ ಗ್ರಾಮ ಚಿನ್ನ ವಶಪಡಿಸಕೊಳ್ಳಲಾಗಿದೆ. ಕಸ್ಟಮ ಸಂಕ ಇಲಾಖೆಯಿಂದ ಶಿವಕುಮಾರ್ ಇವರನ್ನು ಬಂಧಿಸಿದ್ದಾರೆ, ಆ ಸಮಯದಲ್ಲಿ ಆತ ದುಬೈಯಿಂದ ಹಿಂತಿರುಗಿತ್ತಿದ್ದ. ಮತ್ತು ವಿದೇಶದಿಂದ ಬಂದಿರುವ ಒಂದು ಪರಿಚಿತ ವ್ಯಕ್ತಿಯಿಂದ ಚಿನ್ನವನ್ನು ಹಸ್ತಾಂತರಿಸುತ್ತಿದ್ದ. ಅದರ ಬೆಲೆ ೫೫ ಲಕ್ಷ ರೂಪಾಯಿ ಇದೆ. ಅಧಿಕಾರಿಗಳು ಈ ಚಿನ್ನದ ಬಗ್ಗೆ ವಿಚಾರಿಸಿದಾಗ ಶಿವಕುಮಾರ್ ಯಾವುದೇ ದೃಢವಾದ ಮಾಹಿತಿ ನೀಡಲಿಲ್ಲ. ಬಳಿಕ ಆತನನ್ನು ಬಂಧೀಸಲಾಯಿತು. ಈ ಪ್ರಕರಣದಲ್ಲಿ ಇನ್ನೂ ೨ ರನ್ನು ಬಂಧಿಸಲಾಗಿದೆ.