‘ಪಾಕಿಸ್ತಾನದ ಅಣುಬಾಂಬ ಸಿದ್ಧವಾಗಿದೆಯಂತೆ !’ – ಪಾಕಿಸ್ತಾನ

ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆ !

ಇಸ್ಲಾಮಾಬಾದ – ಭಾರತದಲ್ಲಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವರೆಗೆ ಎಲ್ಲರೂ ಪಾಕಿಸ್ತಾನದ ಪರಮಾಣು ಬಾಂಬ್ ಶಕ್ತಿಯ ಮೇಲೆ ಕಿವಿ ಹಿಂಡಿದೆ. ಇದರಿಂದ ಕೆರಳಿದ ಪಾಕಿಸ್ತಾನ ಈಗ ಭಾರತಕ್ಕೆ ಪರಮಾಣುಬಾಂಬ್‌ ನ ಬೆದರಿಕೆಯೊಡ್ಡಿದೆ. ಪಾಕಿಸ್ತಾನದ ಪರಮಾಣು ಬಾಂಬ್ ಅನ್ನು ಮೇಲ್ವಿಚಾರಣೆ ಮಾಡುವ ‘ನ್ಯಾಶನಲ್ ಕಮಾಂಡ್ ಅಥಾರಿಟಿ’ಯ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಖಾಲಿದ್ ಅಹ್ಮದ್ ಕಿಡ್ವಯಿ ಮಾತನಾಡಿ, ಪಾಕಿಸ್ತಾನದ ಪರಮಾಣು ಬಾಂಬ್ ಸಂಪೂರ್ಣವಾಗಿ ಸಿದ್ಧವಾಗಿದೆ. ಪರಮಾಣುಬಾಂಬ್ ಬಗ್ಗೆ ‘ನೊ ಫಸ್ಟ ಯೂಸ್’ (ಮೊದಲ ಬಳಕೆ ಇಲ್ಲ) ಎಂದು ಪಾಕಿಸ್ತಾನದ ಯಾವುದೇ ನೀತಿ ಇಲ್ಲ. ಹಾಗಾಗಿ ಪ್ರಸಂಗ ಬಂದರೆ ನಾವು ಅದನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ.

ಕಿಡ್ವಯಿ ತಮ್ಮ ಮಾತನ್ನು ಮುಂದುವರಿಸಿ, ಭಾರತದ ‘ನೋ ಫಸ್ಟ ಯೂಸ್’ ನೀತಿಯ ಬಗ್ಗೆ ಪಾಕಿಸ್ತಾನದ ರಣತಂತ್ರದ ಬಗ್ಗೆ ಅನುಮಾನಗಳಿವೆ. ಭಾರತವು ಪರಮಾಣು ದಾಳಿ ಮಾಡಬಹುದು ಎಂದು ಅವರ ಅಭಿಪ್ರಾಯವಾಗಿದೆ. ಪಾಕಿಸ್ತಾನದ ಸೇನೆ, ನೌಕಾಪಡೆ ಮತ್ತು ವಾಯುಪಡೆ ಅವರೆಲ್ಲರ ಬಳಿ ಪರಮಾಣು ಬಾಂಬ್‌ಗಳಿವೆ.

ಸಂಪಾದಕೀಯ ನಿಲುವು

ಆರ್ಥಿಕ ಬಿಕ್ಕಟ್ಟು ಮತ್ತು ಜಗತ್ತಿನಾದ್ಯಂತ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸರಕಾರದ ಬಗ್ಗೆ ಅಲ್ಲಿನ ಜನರಲ್ಲಿ ಬಹಳ ಆಕ್ರೋಶವಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಸದಾ ಇಂತಹ ಬೆದರಿಕೆಗಳನ್ನು ನೀಡುತ್ತಿದೆ. ಭಾರತವೂ ಈ ಬೆದರಿಕೆಗಳೆಡೆಗೆ ನಿರ್ಲಕ್ಷಿಸದೇ ಪಾಕಿಸ್ತಾನಕ್ಕೆ `ತಕ್ಕ ಪ್ರತ್ಯುತ್ತರ’ ನೀಡಿ ಅದಕ್ಕೆ ಅದರ ಸ್ಥಾನವನ್ನು ತೋರಿಸಬೇಕು.