Global Executions Last Year : ೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ !

  • ಮರಣದಂಡನೆ ಶಿಕ್ಷೆಯಲ್ಲಿ ಶೇಕಡ ೩೦ರಷ್ಟು ಹೆಚ್ಚಳ

  • ಇರಾನ್ ನಲ್ಲಿ ೮೫೩ ಜನರಿಗೆ ಮರಣದಂಡನೆ

ಲಂಡನ – ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಜಗತ್ತಿನಾದ್ಯಂತ ವಿಧಿಸಲಾಗುವ ಮರಣದಂಡನೆ ಶಿಕ್ಷೆಯ ಬಗ್ಗೆ ವರದಿಯೊಂದನ್ನು ಇತ್ತೀಚಿಗೆ ಪ್ರಕಾಶಿತಗೊಳಿಸಿದೆ. ಈ ವರದಿಯಲ್ಲಿ, ೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ೮೫೩ ಜನರಿಗೆ ಇರಾನಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ. ೨೦೨೨ ರ ತುಲನೆಯಲ್ಲಿ ೨೦೨೩ ರಲ್ಲಿ ಜಗತ್ತಿನಾದ್ಯಂತ ಮರಣದಂಡನೆಯ ಶಿಕ್ಷೆ ನೀಡುವ ಪ್ರಮಾಣದಲ್ಲಿ ಶೇಕಡ ೩೦ ರಷ್ಟು ಹೆಚ್ಚಳವಾಗಿದೆ. ಚೀನಾದಲ್ಲಿ ಸಾವಿರಾರು ಜನಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಿದೆ; ಆದರೆ ಚೀನಾ ಅಧಿಕೃತವಾಗಿ ಅಂಕಿ-ಅಂಶಗಳನ್ನು ನೀಡದ ಕಾರಣ ಚೀನಾದಲ್ಲಿ ನೀಡಲಾದ ಶಿಕ್ಷೆಗಳ ವಿವರ ಈ ವರದಿಯಲ್ಲಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಇರಾನಿನಲ್ಲಿ ಚಿಕ್ಕ ಚಿಕ್ಕ ಅಪರಾಧಗಳಿಗೂ ಕೂಡ ಮರಣ ದಂಡನೆಯ ಶಿಕ್ಷೆ

ಅಮ್ನೆಸ್ಟಿ ಇಂಟರ್ನ್ಯಾಷನಲ್ ನ ಕಾರ್ಯದರ್ಶಿ ಎಗ್ನೇಶ್ ಕೆಲಮರ್ಡ್ ಅವರು ಮಾತನಾಡಿ, ಇರಾನಿನಲ್ಲಿ ಪ್ರತಿಯೊಂದು ಸಣ್ಣ ಅಪರಾಧಕ್ಕೂ ಕೂಡ ಮರಣದಂಡನೆಯ ಶಿಕ್ಷೆ ವಿಧಿಸಲಾಗಿದೆ ಎಂದರು. ವಿಶೇಷವಾಗಿ ಬಡ ಬಲೂಚ್ ಜನಾಂಗದ ಜನರಿಗೆ ಭೇದ-ಭಾವದಿಂದ ಶಿಕ್ಷೆ ವಿಧಿಸಲಾಗುತ್ತಿದೆ. ಇರಾನ್ ನಂತರ ಗಲ್ಲು ಶಿಕ್ಷೆ ವಿಧಿಸುವ ದೇಶಗಳಲ್ಲಿ ಸೌದಿ ಅರೇಬಿಯಾ, ಸೋಮಾಲಿಯಾ ಮತ್ತು ಅಮೇರಿಕಾ ನಂತರದ ಸ್ಥಾನದಲ್ಲಿವೆ ಎಂದು ತಿಳಿಸಿದರು.