Exchange Kartarpur For kashmir : ‘ಕರ್ತಾರಪುರ ಸಾಹೀಬ ಬದಲಾಗಿ ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲಿ’ !

ಭಾರತದಲ್ಲಿನ ಪಾಕಿಸ್ತಾನದ ಮಾಜಿ ಉಚ್ಚಾಯುಕ್ತ ಅಬ್ದುಲ್ ಬಾಸೀತ ಅವರ ಹೇಳಿಕೆ !

ಅಬ್ದುಲ್ ಬಾಸೀತ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ವಾಸಿಸುವ ಸಿಖರು ಅನೇಕ ಬಾರಿ ಕರ್ತಾರಪುರ ಗುರುದ್ವಾರ ಹಿಂಪಡೆಯುವಂತೆ ಆಗ್ರಹಿಸುತ್ತಾರೆ; ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಅವರು ಕಾಶ್ಮೀರದ ಬದಲಾಗಿ ನಮ್ಮಿಂದ ಕರ್ತಾರಪುರ ಸಾಹೇಬ ಕೇಳಿದರೆ ಆಗ ಅದರ ಬಗ್ಗೆ ನಾವು ಯೋಚನೆ ಮಾಡಬಹುದೆಂದು ಭಾರತದಲ್ಲಿನ ಪಾಕಿಸ್ತಾನದ ಮಾಜಿ ಉಚ್ಚಾಯುಕ್ತ ಅಬ್ದುಲ್ ಬಾಸೀದ್ ಅವರು ಹೇಳಿಕೆ ನೀಡಿದ್ದಾರೆ. ಅವರು ಪಾಕಿಸ್ತಾನದ ಒಂದು ಸುದ್ದಿ ವಾಹಿನಿಗೆ ಸಂದರ್ಶನ ನೀಡುವಾಗ ಮಾತನಾಡುತ್ತಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಕೆಲವು ದಿನಗಳ ಹಿಂದೆ ಪ್ರಧಾನಮಂತ್ರಿ ಮೋದಿ ಅವರು ಪಂಜಾಬದ ಪಟಿಯಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ೧೯೭೧ರ ಯುದ್ಧದ ಸಮಯದಲ್ಲಿ ನಾನು ಪ್ರಧಾನಮಂತ್ರಿ ಆಗಿದ್ದಿದ್ದರೆ ಆಗ ಪಾಕಿಸ್ತಾನದಲ್ಲಿರುವ ಕಾರ್ತಾರಪುರ ಗುರುದ್ವಾರ ಹಿಂಪಡೆಯುತ್ತಿದ್ದೆ, ಎಂದು ಹೇಳಿಕೆ ನೀಡಿದ್ದರು. ಪ್ರಧಾನಿಯವರ ಹೇಳಿಕೆಗೆ ಉತ್ತರವಾಗಿ ಬಾಸೀತ ಈ ಮೇಲಿನ ಹೇಳಿಕೆ ನೀಡಿದ್ದಾರೆ.

ಕರ್ತಾರಪುರ ಸಾಹೇಬ್ ಗುರುದ್ವಾರ

 

ಕಾರ್ತಾರಪುರ ಸಾಹಿಬ್ ಗುರುದ್ವಾರದ ಮಾಹಿತಿ

ಕರ್ತಾರಪುರ ಸಾಹೇಬ ಇದು ಪಾಕಿಸ್ತಾನದ ನಾರೋವಾಲ ಜಿಲ್ಲೆಯ ರಾವೀ ನದಿಯ ತೀರದಲ್ಲಿದೆ. ಅದರ ಇತಿಹಾಸ ೫೦೦ ವರ್ಷಕ್ಕಿಂತಲೂ ಪ್ರಾಚೀನವಾಗಿದೆ. ಸಿಖ್ ಪಂಥದ ಸಂಸ್ಥಾಪಕರಾದ ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದರು ಮತ್ತು ಇಲ್ಲಿಯೇ ಅವರು ದೇಹ ತ್ಯಾಗ ಮಾಡಿದ್ದರು. ಆದ್ದರಿಂದ ಸಿಖ್ ರಿಗೆ ಈ ಕ್ಷೇತ್ರದ ವಿಶೇಷ ಮಹತ್ವವಿದೆ. ಕರ್ತಾರಪುರ ಕಾರಿಡಾರ್ ಅನ್ನು ೯ ನವೆಂಬರ್ ೨೦೧೯ ರಂದು ತೆರೆಯಲಾಯಿತು. ಈ ಕಾರಿಡಾರ್ ಕರ್ತಾರಪುರ ಸಾಹೇಬ ಕ್ಷೇತ್ರ ಮತ್ತು ಪಂಜಾಬನ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾಯಕ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ.

ಸಂಪಾದಕೀಯ ನಿಲುವು

ಸಂಪೂರ್ಣ ಪಾಕಿಸ್ತಾನವೇ ಭಾರತದ ಒಂದು ಭಾಗವಾಗಿತ್ತು ಮುಂದೊಂದು ದಿನ ಮತ್ತೆ ಅದು ಭಾರತದ ಜೊತೆಗೆ ಸೇರಲಿದೆ. ಆದ್ದರಿಂದ ಅಬ್ದುಲ್ ಬಾಸೀತ ನಂತವರು ಈ ರೀತಿಯ ಹೇಳಿಕೆ ನೀಡುವ ಬದಲು ತಮ್ಮ ದೇಶದ ಅಸ್ತಿತ್ವ ಉಳಿಸಿಕೊಳ್ಳುವುದರ ಕಡೆಗೆ ಗಮನ ನೀಡಬೇಕು !