ಕಾಬುಲ್ – ಅಪಘಾನಿಸ್ತಾನದಿಂದ ಅಮೇರಿಕಾ ಸೈನ್ಯ ಹಿಂತಿರುಗಿದ ನಂತರ ಅಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಿದೆ. ಈಗ ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದೆ. ಅಪಘಾನಿಸ್ತಾನದಲ್ಲಿನ ಜನರು ಪಾಕಿಸ್ತಾನವನ್ನು ದ್ವೇಷಿಸುತ್ತಿರುವುದು ಒಂದು ಉದಾಹರಣೆಯಿಂದ ಬೆಳಕಿಗೆ ಬಂದಿದೆ. ಇತ್ತೀಚಿಗೆ ಓರ್ವ ಭಾರತೀಯ ಯೂಟ್ಯೂಬ್ ಚಾನೆಲ್ ನಡೆಸುವ ವ್ಯಕ್ತಿ ಅಪಘಾನಿಸ್ತಾನದಿಂದ ಒಂದು ವಿಡಿಯೋ ಪ್ರಸಾರ ಮಾಡಿದ್ದನು. ಈ ವಿಡಿಯೋದಲ್ಲಿ ಅಪಘಾನಿ ಜನರು, ‘ನೀವು ಪಾಕಿಸ್ತಾನದ ಮೇಲೆ ಭಾರತದಿಂದ ದಾಳಿ ನಡೆಸಿ, ನಾವು ಇಲ್ಲಿಂದ ನಡೆಸುತ್ತೇವೆ ; ಪಾಕಿಸ್ತಾನವನ್ನು ನಾಶಗೊಳಿಸೋಣ’ ಎಂದು ಹೇಳುತ್ತಿರುವುದು ಕಾಣುತ್ತಿದೆ. ಈ ವಿಡಿಯೋದಲ್ಲಿ ಅವರು, ‘ಭಾರತ ನಮ್ಮ ಮಿತ್ರ ರಾಷ್ಟ್ರ ಹಾಗೂ ಸಹೋದರ ರಾಷ್ಟ್ರವಾಗಿದೆ, ಪಾಕಿಸ್ತಾನ ನಮ್ಮ ಶತ್ರು. ನೀವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಅಪಘಾನಿಸ್ತಾನ ಮತ್ತು ಇಲ್ಲಿಯ ಜನರು ನಿಮಗೆ ಸಹಕಾರ ಮಾಡುವರು’ ಎಂದು ಹೇಳಿದ್ದಾರೆ.
ಅಪಘಾನ್ ಜನರಲ್ಲಿ ಪಾಕಿಸ್ತಾನದ ಬಗ್ಗೆ ದ್ವೇಷ !
ಸಾಮಾನ್ಯ ಅಪಘಾನಿ ಜನರಲ್ಲಿ ಪಾಕಿಸ್ತಾನದ ಬಗ್ಗೆ ದ್ವೇಷವಿದೆ. ಅದರ ಹಿಂದೆ ಅನೇಕ ಕಾರಣಗಳಿವೆ. ಅದರಲ್ಲಿನ ಒಂದು ಕಾರಣವೆಂದರೆ: ಅಫಘನ್ ಯುದ್ಧದಲ್ಲಿ ಪಾಕಿಸ್ತಾನವು ಅಮೆರಿಕಕ್ಕೆ ಸಹಾಯ ಮಾಡಿದ್ದು. ಪಾಕಿಸ್ತಾನ್ ಮತ್ತು ಅಪಘಾನಿಸ್ತಾನ್ ನಡುವೆ ಇತ್ತೀಚಿಗೆ ಒತ್ತಡದ ವಾತಾವರಣ ಕಂಡು ಬರುತ್ತಿದೆ. ಎರಡು ದೇಶದ ಗಡಿಯಲ್ಲಿ ಗುಂಡಿನ ದಾಳಿಯ ಘಟನೆಗಳು ಕೂಡ ಹೆಚ್ಚಿವೆ.
ಸಂಪಾದಕೀಯ ನಿಲುವುಭವಿಷ್ಯದಲ್ಲಿ ಯಾವಾಗ ಇಸ್ಲಾಮ್ ಅಪಾಯದಲ್ಲಿದೆ ಎಂಬ ವದಂತಿ ಹಬ್ಬಿದರೆ ಆಗ ಪಾಕಿಸ್ತಾನ ಅಥವಾ ಅಪಘಾನಿಸ್ತಾನದಲ್ಲಿನ ಮುಸಲ್ಮಾನರು ಒಗ್ಗೂಡುವರು ಎಂಬುದು ಇಲ್ಲಿಯವರೆಗಿನ ಇತಿಹಾಸವಾಗಿದೆ. ಆದ್ದರಿಂದ ಭಾರತದಲ್ಲಿನ ಹಿಂದುಗಳು ಜಾಗೃತವಾಗಿರುವುದೇ ಉತ್ತಮ. |